alex Certify ಗಿನ್ನಿಸ್ ದಾಖಲೆಗೆ ಪಾತ್ರವಾಯ್ತು ಈ ಮಹಿಳೆ ಜನನ ಪ್ರಮಾಣ ಪತ್ರ…! ಅಷ್ಟಕ್ಕೂ ಅದ್ರಲ್ಲಿ ಅಂಥಾ ವಿಶೇಷತೆ ಏನಿದೆ ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿನ್ನಿಸ್ ದಾಖಲೆಗೆ ಪಾತ್ರವಾಯ್ತು ಈ ಮಹಿಳೆ ಜನನ ಪ್ರಮಾಣ ಪತ್ರ…! ಅಷ್ಟಕ್ಕೂ ಅದ್ರಲ್ಲಿ ಅಂಥಾ ವಿಶೇಷತೆ ಏನಿದೆ ಗೊತ್ತಾ..?

ಮಕ್ಕಳಿಗೆ ಡಿಫರೆಂಟ್ ಆಗಿ ಹೆಸರಿಡಬೇಕೆಂದು ಪೋಷಕರು ಸಿಕ್ಕಾಪಟ್ಟೆ ಹುಡುಕಾಟ ನಡೆಸುತ್ತಾರೆ. ಕೆಲವೊಂದು ಹೆಸರುಗಳು ಚಿಕ್ಕದಾಗಿ ಚೊಕ್ಕವಾಗಿದ್ದರೆ, ಇನ್ನೂ ಕೆಲವು ಹೆಸರುಗಳು ಮಾರುದ್ದ ಇರುತ್ತವೆ.

ತಂದೆ, ತಾಯಿ, ಅಜ್ಜ, ಅಜ್ಜಿ, ದೇವರು ಮುಂತಾದವರ ಹೆಸರುಗಳನ್ನು ಸೇರಿಸಿ ಮಕ್ಕಳಿಗೆ ಇಡುತ್ತಾರೆ. ಆದರೆ, ಇಲ್ಲೊಬ್ಬಾಕೆಯ ಹೆಸರು ಎಷ್ಟುದ್ದ ಇದೆ ಎಂದು ಕೇಳಿದ್ರೆ ಖಂಡಿತಾ ನೀವು ನಿಬ್ಬೆರಗಾಗ್ತೀರಾ..!

1984 ರಲ್ಲಿ ಸಾಂಡ್ರಾ ವಿಲಿಯಮ್ಸ್ ಎಂಬಾಕೆ ತನ್ನ ಮಗಳಿಗೆ ವಿಭಿನ್ನವಾಗಿ ಉದ್ದನೆಯ ಹೆಸರಿಡೋಣ ಎಂದು ಯೋಜಿಸಿದ್ರು. ಅದರಂತೆ ಅವರು ‘ರೋಶಾಂಡಿಟೆಲೆನೆಸಿಯೌನ್ನೆವೆಸ್ಚೆಂಕ್ ಕೊಯಾನಿಸ್ಕ್ವಾಟ್ಸಿಯುತ್ ವಿಲಿಯಮ್ಸ್’ ಎಂದು ನಾಮಕರಣ ಮಾಡಿದ್ದರು. ಆದ್ರೆ, ಸಾಂಡ್ರಾ ಪತಿ ಈ ಹೆಸರಿಗೆ ಮತ್ತಷ್ಟು ತಿದ್ದುಪಡಿ ತಂದು, ಅದನ್ನು 1,019 ಅಕ್ಷರಗಳಿಗೆ ವಿಸ್ತರಿಸಿದ್ದಾರೆ.

ಈಕೆಯ ಜನನ ಪ್ರಮಾಣಪತ್ರ ಬರೋಬ್ಬರಿ 2 ಅಡಿ ಎತ್ತರವಿದೆ. ಆದರೆ, ಈಕೆಯ ಸ್ನೇಹಿತರು ಮಾತ್ರ ಸರಳವಾಗಿ ಜೇಮಿ ಅಂತಾ ಕರೆಯುತ್ತಾರೆ. ಅಷ್ಟುದ್ದ ಹೆಸರನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ ಹೇಳಿ..?

ಜೇಮಿಯ ಈ ಪೂರ್ಣ ಹೆಸರು ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾಗಿದೆ. ಗಿನ್ನಿಸ್ ವಿಶ್ವ ದಾಖಲೆಯನ್ನು ಮುರಿಯಲು ಏನಾದರೂ ಮಾಡಬೇಕಾಗಿತ್ತು. ಹೀಗಾಗಿ ಪುತ್ರಿಯ ಹೆಸರನ್ನು ವಿಭಿನ್ನವಾಗಿ ಇಡಲು ಯೋಜಿಸಿದ್ದಾಗಿ ಸಾಂಡ್ರಾ ತಿಳಿಸಿದ್ದಾರೆ.

— Guinness World Records (@GWR) October 5, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...