ಈಗ ಎಲ್ಲರೂ ಮನೆಯಲ್ಲಿಯೇ ತರಕಾರಿ ಬೆಳೆಯುವತ್ತ ಆಸಕ್ತಿ ತೋರಿಸುತ್ತಿದ್ದಾರೆ. ಸ್ಥಳಾವಕಾಶ ಇಲ್ಲದವರು ಟೆರೇಸ್ ಮೇಲೆ ಪಾಟ್ ಗಳನ್ನು ತಂದಿಟ್ಟುಕೊಂಡು ಅದರಲ್ಲಿಯೇ ತರಕಾರಿ, ಸೊಪ್ಪು, ಹೂವಿನ ಗಿಡಗಳನ್ನು ಹಾಕುತ್ತಿದ್ದಾರೆ.
ಇಲ್ಲಿ ತರಕಾರಿ ಹಾಗೂ ಹೂವಿನ ಗಿಡಗಳು ಚೆನ್ನಾಗಿ ಬೆಳೆದು ಫಲ ಕೊಡುವಂತಾಗಲು ಲಿಕ್ವಿಡ್ ಫರ್ಟಿಲೈಸರ್ ಇದೆ. ಒಮ್ಮೆ ಮನೆಯಲ್ಲಿ ಮಾಡಿ ನೋಡಿ.
ಒಂದು ಲೀಟರ್ ನೀರಿಗೆ ½ ಕಪ್ ಹಾಲು ಹಾಕಿ ನಂತರ 1 ಟೀ ಸ್ಪೂನ್ ಎಪ್ಸಂ ಸಾಲ್ಟ್ ಹಾಕಿ. ನಂತರ ಕಂಪೋಸ್ಟ್ ಟೀ ಲಿಕ್ವಿಡ್ ಅನ್ನು 1 ಲೀಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಬಳಿಕ ಇದನ್ನು ಒಂದು ಸ್ಪ್ರೇ ಬಾಟಲಿಗೆ ತುಂಬಿಕೊಂಡು ಗಿಡಕ್ಕೆ ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಸ್ಪ್ರೇ ಮಾಡಿ. ಇದರಿಂದ ಗಿಡಕ್ಕೆ ಹುಳುಗಳ ಕಾಟ ಕಾಡುವುದಿಲ್ಲ ಹಾಗೂ ಚೆನ್ನಾಗಿ ಬೆಳೆಯುತ್ತದೆ.