alex Certify ಗಾರ್ಲಿಕ್ ʼಮಶ್ರೂಮ್ʼ ಸವಿದಿದ್ದೀರಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾರ್ಲಿಕ್ ʼಮಶ್ರೂಮ್ʼ ಸವಿದಿದ್ದೀರಾ……?

ದಿನಾ ಒಂದೇ ರೀತಿ ಅಡುಗೆ ತಿಂದು ಬೇಜಾರಾದವರು ಈ ಗಾರ್ಲಿಕ್ ಮಶ್ರೂಮ್ ಅನ್ನು ಒಮ್ಮೆ ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೂ ತುಂಬಾ ಸುಲಭವಿದೆ. ರುಚಿಯೂ ಚೆನ್ನಾಗಿರುತ್ತದೆ.

ಮೊದಲಿಗೆ 1 ½ ಕಪ್ ಮಶ್ರೂಮ್ ಅನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿಕೊಂಡು ಉಪ್ಪು ಅರಿಶಿನದ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಸಿಡಿ. ಒಂದು ಮಿಕ್ಸಿ ಜಾರಿಗೆ 5 ಬೆಳ್ಳುಳ್ಳಿ ಎಸಳು, 5 ಒಣಮೆಣಸು, ¾ ಟೇಬಲ್ ಸ್ಪೂನ್ ವಿನೇಗರ್, ½ ಟೀ ಸ್ಪೂನ್ ಸಕ್ಕರೆ, 2 ಟೇಬಲ್ ಸ್ಪೂನ್ ನೀರು, ¼ ಟೀ ಸ್ಪೂನ್ ಖಾರದ ಪುಡಿ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.

ಫೇಸ್​ಬುಕ್​, ವಾಟ್ಸಾಪ್​, ಇನ್ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​ ಸುರಿಮಳೆ

ನಂತರ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ¼ ಟೀ ಸ್ಪೂನ್ ಜೀರಿಗೆ ಹಾಕಿ. ನಂತರ ಈರುಳ್ಳಿ ಸೇರಿಸಿ ಫ್ರೈ ಮಾಡಿ. ನಂತರ ಇದಕ್ಕೆ ಮಿಕ್ಸಿಯಲ್ಲಿ ರುಬ್ಬಿಟ್ಟು ಮಸಾಲೆಯನ್ನು ಸೇರಿಸಿ 3 ನಿಮಿಷಗಳ ಕಾಲ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣ ಪರಿಮಳ ಬರುತ್ತಿದ್ದಂತೆ ಮಶ್ರೂಮ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಮುಚ್ಚಳ ಮುಚ್ಚಿ ಬೇಯಲು ಬಿಡಿ. ಇದು ಚೆನ್ನಾಗಿ ಬೇಯಲಿ. ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...