ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಜನಸಾಮಾನ್ಯರ ಕೈಗೆಟುಕಬಲ್ಲ ಹಣ್ಣುಗಳಲ್ಲಿ ಒಂದು ಬಾಳೆಹಣ್ಣು.
ಅಧಿಕ ಪೋಷಕಾಂಶಗಳನ್ನು ಹೊಂದಿರುವ ಬಾಳೆಹಣ್ಣು ಆರೋಗ್ಯಕ್ಕೆ ಅಷ್ಟೇ ಅಲ್ಲ, ಸುಟ್ಟ ಗಾಯಗಳಿಗೂ ಉಪಯೋಗಕ್ಕೆ ಬರುತ್ತದೆ. ಅದು ಹೇಗೆ ಅಂತ ನೋಡಿ.
* ಸುಟ್ಟ ಗಾಯಗಳಿಗೆ ಹಿಸುಕಿದ ಬಾಳೆಹಣ್ಣಿನ ಲೇಪನ ಮಾಡುವುದರಿಂದ ಉರಿ ಶಮನವಾಗುತ್ತದೆ ಗಾಯ ಬೇಗ ಮಾಡಲು ಸಹಕಾರಿ.
* ಗಾಜಿನ ಚೂರುಗಳನ್ನು ತುಳಿದು ಗಾಯಗಳು ಉಂಟಾದಾಗ ಬಾಳೆಹಣ್ಣಿನ ಸಿಪ್ಪೆಯ ಪ್ಲಾಸ್ಟರ್ ಹಾಕಿ ಸ್ವಲ್ಪ ಸಮಯದ ನಂತರ ತೆಗೆದರೆ ಗಾಜು ಸುಲಭವಾಗಿ ಹೊರಬರುತ್ತದೆ.
* ಸೊಳ್ಳೆ ಕಡಿತದಿಂದ ಗಾಯಗಳು ಉಂಟಾದರೆ ಬಾಳೆಹಣ್ಣಿನ ಸಿಪ್ಪೆಯಿಂದ ತಿಕ್ಕಿದರೆ ಬಾವು, ತುರಿಕೆ ಕಡಿಮೆಯಾಗುತ್ತದೆ.
* ಬಾಳೆಹಣ್ಣಿನ ಸಿಪ್ಪೆಯನ್ನು ಒಣಗಿಸಿ ಕೊಬ್ಬರಿ ಎಣ್ಣೆಯೊಂದಿಗೆ ಅರೆದು ಲೇಪಿಸಿದರೆ ತುರಿಕೆ, ಕಜ್ಜಿಗಳು ಮಾಯವಾಗುತ್ತವೆ.
* ಬಾಳೆಹಣ್ಣನ್ನು ತುಪ್ಪದಲ್ಲಿ ಹುರಿದು ಕಲ್ಲುಸಕ್ಕರೆ, ಜೇನುತುಪ್ಪ, ಏಲಕ್ಕಿ ಪುಡಿ ಬೆರೆಸಿ ನಿಯಮಿತವಾಗಿ ಸೇವಿಸಿದರೆ ಮಹಿಳೆಯರ ಸಮಸ್ಯೆಯಾದ ಬಿಳಿಸೆರಗು ನಿಯಂತ್ರಣದಲ್ಲಿರುತ್ತದೆ.
* ಅಧಿಕ ರಕ್ತದೊತ್ತಡ ಇರುವವರು ದಿನಕ್ಕೆರಡು ಬಾರಿ ಬಾಳೆಹಣ್ಣು ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಈ ಮೂಲಕ ಹೃದಯದ ಮೇಲಿನ ಭಾರ ಕಡಿಮೆಯಾಗಿ ಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ.