alex Certify ಗಾಯಕಿಗೆ ಕಿರುಕುಳ ನೀಡಿದ ಟೆಕ್ಕಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯಕಿಗೆ ಕಿರುಕುಳ ನೀಡಿದ ಟೆಕ್ಕಿ ಅರೆಸ್ಟ್

27 ವರ್ಷದ ಗಾಯಕಿಗೆ ಆಕ್ಷೇಪಾರ್ಹ ಸಂದೇಶಗಳು ಹಾಗೂ ಫೋಟೋಗಳನ್ನು ಕಳುಹಿಸಿದ ಆರೋಪದ ಅಡಿಯಲ್ಲಿ ವಿಶಾಖಪಟ್ಟಣಂನ 34 ವರ್ಷದ ಇಂಜಿನಿಯರ್​​ನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.‌

ವಿಜಯ್​ಕಾಂತ್​ ಮಂದಾ 2016ರಿಂದ ಗಾಯಕಿಯನ್ನು ಹಾಗೂ ಆಕೆಯ ಮ್ಯಾನೇಜರ್​ನ್ನು ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳಲ್ಲಿ ಫಾಲೋ ಮಾಡುತ್ತಿದ್ದ ಎನ್ನಲಾಗಿದೆ. ಮಾರ್ಚ್ 17ರಿಂದ ದಕ್ಷಿಣ ಮುಂಬೈನಲ್ಲಿರುವ ಗಾಯಕಿಯ ನಿವಾಸದ ಗೇಟ್​​ನಲ್ಲಿ ಕಾಣಿಸಿಕೊಂಡ ಬಳಿಕ ಅವರು ಕೇಸ್​ ದಾಖಲಿಸಿದ್ದಾರೆ.

2018ರಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಮಂದಾ ಭಾಗವಹಿಸಿದ್ದ. ಈ ವೇಳೆ ಮಂದಾ ಗಾಯಕಿಯ ಕಚೇರಿಗೂ ಆಗಮಿಸಿದ್ದ ಎಂದು ದೂರು ದಾಖಲಿಸಿರುವ ಮ್ಯಾನೇಜರ್​ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಗಾಯಕಿಯು ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಹೈದರಾಬಾದ್​​ನಲ್ಲಿ 2019ರಲ್ಲಿ ಭಾಗಿಯಾಗಿದ್ದ ಎಲ್ಲಾ ಸಂಗೀತ ಕಚೇರಿಯಲ್ಲಿ ಈ ಟೆಕ್ಕಿ ಕಾಣಿಸಿಕೊಂಡಿದ್ದಾನೆ. ನಾಲ್ಕು ವಿವಿಧ ಮೊಬೈಲ್​ ಸಂಖ್ಯೆಗಳಿಂದ ಈತ ಗಾಯಕಿಗೆ ಆಕ್ಷೇಪಾರ್ಹ ಮೆಸೇಜ್​ಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.

ಆತ ಒಮ್ಮೆ ಗಾಯಕಿಯ ಕಚೇರಿಗೆ ಆಗಮಿಸಿದ್ದ ವೇಳೆಯಲ್ಲಿ ನಾನು ಅವರಿಗೆ ನನ್ನ ಮೊಬೈಲ್​ ಸಂಖ್ಯೆಯನ್ನು ನೀಡಬೇಕಾಗಿ ಬಂತು. ಆದರೆ ಆತ ಪದೇ ಪದೇ ಕರೆ ಮಾಡಿ ನಾನು ಗಾಯಕಿಯನ್ನು ಭೇಟಿಯಾಗಬೇಕೆಂದು ಹೇಳುತ್ತಿದ್ದ. ನಾನು ಅವರು ಬ್ಯುಸಿ ಇದ್ದಾರೆ ಎಂದು ಹೇಳಿ ಕರೆಯನ್ನು ಕಟ್​ ಮಾಡುತ್ತಿದ್ದೆ ಎಂದು ಮ್ಯಾನೇಜರ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...