27 ವರ್ಷದ ಗಾಯಕಿಗೆ ಆಕ್ಷೇಪಾರ್ಹ ಸಂದೇಶಗಳು ಹಾಗೂ ಫೋಟೋಗಳನ್ನು ಕಳುಹಿಸಿದ ಆರೋಪದ ಅಡಿಯಲ್ಲಿ ವಿಶಾಖಪಟ್ಟಣಂನ 34 ವರ್ಷದ ಇಂಜಿನಿಯರ್ನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ವಿಜಯ್ಕಾಂತ್ ಮಂದಾ 2016ರಿಂದ ಗಾಯಕಿಯನ್ನು ಹಾಗೂ ಆಕೆಯ ಮ್ಯಾನೇಜರ್ನ್ನು ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳಲ್ಲಿ ಫಾಲೋ ಮಾಡುತ್ತಿದ್ದ ಎನ್ನಲಾಗಿದೆ. ಮಾರ್ಚ್ 17ರಿಂದ ದಕ್ಷಿಣ ಮುಂಬೈನಲ್ಲಿರುವ ಗಾಯಕಿಯ ನಿವಾಸದ ಗೇಟ್ನಲ್ಲಿ ಕಾಣಿಸಿಕೊಂಡ ಬಳಿಕ ಅವರು ಕೇಸ್ ದಾಖಲಿಸಿದ್ದಾರೆ.
2018ರಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಮಂದಾ ಭಾಗವಹಿಸಿದ್ದ. ಈ ವೇಳೆ ಮಂದಾ ಗಾಯಕಿಯ ಕಚೇರಿಗೂ ಆಗಮಿಸಿದ್ದ ಎಂದು ದೂರು ದಾಖಲಿಸಿರುವ ಮ್ಯಾನೇಜರ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಗಾಯಕಿಯು ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಹೈದರಾಬಾದ್ನಲ್ಲಿ 2019ರಲ್ಲಿ ಭಾಗಿಯಾಗಿದ್ದ ಎಲ್ಲಾ ಸಂಗೀತ ಕಚೇರಿಯಲ್ಲಿ ಈ ಟೆಕ್ಕಿ ಕಾಣಿಸಿಕೊಂಡಿದ್ದಾನೆ. ನಾಲ್ಕು ವಿವಿಧ ಮೊಬೈಲ್ ಸಂಖ್ಯೆಗಳಿಂದ ಈತ ಗಾಯಕಿಗೆ ಆಕ್ಷೇಪಾರ್ಹ ಮೆಸೇಜ್ಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.
ಆತ ಒಮ್ಮೆ ಗಾಯಕಿಯ ಕಚೇರಿಗೆ ಆಗಮಿಸಿದ್ದ ವೇಳೆಯಲ್ಲಿ ನಾನು ಅವರಿಗೆ ನನ್ನ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗಿ ಬಂತು. ಆದರೆ ಆತ ಪದೇ ಪದೇ ಕರೆ ಮಾಡಿ ನಾನು ಗಾಯಕಿಯನ್ನು ಭೇಟಿಯಾಗಬೇಕೆಂದು ಹೇಳುತ್ತಿದ್ದ. ನಾನು ಅವರು ಬ್ಯುಸಿ ಇದ್ದಾರೆ ಎಂದು ಹೇಳಿ ಕರೆಯನ್ನು ಕಟ್ ಮಾಡುತ್ತಿದ್ದೆ ಎಂದು ಮ್ಯಾನೇಜರ್ ಹೇಳಿದ್ದಾರೆ.