alex Certify ‘ಗಾನ ಗಂಧರ್ವ’ SPB ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗಾನ ಗಂಧರ್ವ’ SPB ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಸಂಗತಿ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು. ಸೆಪ್ಟೆಂಬರ್ 25 ಕ್ಕೆ ಅವರು ಇಹಲೋಕ ತ್ಯಜಿಸಿ ಎರಡು ವರ್ಷಗಳಾಗಲಿದ್ದು, ಆದರೆ ಅವರು ತಮ್ಮ ಹಾಡುಗಳ ಮೂಲಕ ಎಂದಿಗೂ ಅಜರಾಮರ. ಇಂದಿಗೂ ಸಹ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿರುವ ಹಾಡುಗಳು ಮನೆ ಮನೆಗಳಲ್ಲಿ ಮೊಳಗುತ್ತಲೇ ಇದೆ.

ಮೇರು ಕಲಾವಿದರಾಗಿದ್ದರೂ ಸಹ ಅವರು ತಮ್ಮ ಸರಳತೆಯಿಂದಾಗಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು. ಅವರ ಹಾಡುಗಳಿಂದಲೇ ಕೆಲವೊಂದು ಚಿತ್ರಗಳು ಹಿಟ್ ಆಗಿದೆ ಎಂದರೆ ಅತಿಶಯೋಕ್ತಿ ಏನಲ್ಲ. ಚಿತ್ರರಂಗದ ಖ್ಯಾತ ನಟರು ತಮ್ಮ ಚಿತ್ರಗಳಿಗೆ ಎಸ್.ಪಿ. ಬಾಲಸುಬ್ರಮಣ್ಯಂ ಅವರೇ ಹಾಡಬೇಕೆಂಬ ಕಾರಣಕ್ಕೆ ಕಾದಿದ್ದು ಹಾಡಿಸಿರುವ ಘಟನೆಗಳು ಅನೇಕ.

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ದಾಖಲೆ ಹೊಂದಿದ್ದು, ಇಂಟರೆಸ್ಟಿಂಗ್ ಸಂಗತಿ ಎಂದರೆ ನಾಲ್ಕು ವಿಭಿನ್ನ ಭಾರತೀಯ ಭಾಷೆಗಳಲ್ಲಿ ಆಡಿದ ಹಾಡುಗಳಿಗಾಗಿ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೇರು ನಟ ಡಾ. ರಾಜಕುಮಾರ್ ಅವರನ್ನು ಹೊರತುಪಡಿಸಿ ಇತರೆ ಎಲ್ಲ ನಟರ ಹಾಡುಗಳಿಗೆ ಎಸ್.ಪಿ.ಬಿ. ಕಂಠದಾನ ಮಾಡಿದ್ದು, ಬಾಲಸುಬ್ರಹ್ಮಣ್ಯಂ ನಟಿಸಿದ ಚಿತ್ರಕ್ಕೆ ಅವರಿಗೆ ಡಾ. ರಾಜಕುಮಾರ್ ಅವರು ಹಾಡಿರುವುದು ಮತ್ತೊಂದು ವಿಶೇಷ.

ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ ಒಂದು ಕುತೂಹಲಕರ ಸಂಗತಿ. ಇಂಜಿನಿಯರಿಂಗ್ ಪ್ರವೇಶ ಪಡೆದಿದ್ದ ಅವರು ಕಾರಣಾಂತರಗಳಿಂದ ಕಾಲೇಜು ಬಿಟ್ಟಿದ್ದರು. ಬಳಿಕ ಸ್ನೇಹಿತರ ಒತ್ತಾಯದ ಮೇರೆಗೆ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರು, 1966ರಲ್ಲಿ ‘ಶ್ರೀ ಮರ್ಯಾದ ರಾಮಣ್ಣ’ ಚಿತ್ರದ ಮೂಲಕ ಗಾಯನ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಆ ಬಳಿಕ ಉತ್ತುಂಗ ಸ್ಥಾನಕ್ಕೆ ಏರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...