alex Certify ಗಾನಕೋಗಿಲೆ ಲತಾ ಮಂಗೇಶ್ಕರ್​ಗೆ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಪಾಕ್ ಗಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾನಕೋಗಿಲೆ ಲತಾ ಮಂಗೇಶ್ಕರ್​ಗೆ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಿದ ಪಾಕ್ ಗಾಯಕ

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್​​ ಫೆಬ್ರವರಿ 6ರಂದು ತಮ್ಮ ಅಭಿಮಾನಿಗಳನ್ನು ತೊರೆದು ಬಾರದ ಲೋಕಕ್ಕೆ ತೆರಳಿದರು. ಲತಾ ಮಂಗೇಶ್ಕರ್​ರ ಸಾವಿನ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಕೇವಲ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಕೂಡ ಅಭಿಮಾನಿಗಳು ಸಂತಾಪ ಸೂಚಿಸಿದ್ದರು. ಲತಾ ಮಂಗೇಶ್ಕರ್​ ನಿಧನದ ಶೋಕ ಕೇವಲ ಭಾರತ ಮಾತ್ರವಲ್ಲದೇ ಗಡಿಯಾಚೆಗೂ ದಾಟಿದ್ದು ಪಾಕಿಸ್ತಾನ ಗಾಯಕ ಅತೀಫ್​ ಅಸ್ಲಾಂ ಕೂಡ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಗಿದೆ.‌

ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತೀಫ್​​ ಲತಾ ಮಂಗೇಶ್ಕರ್​​ ಫೋಟೋದ ಹಿನ್ನೆಲೆಯಲ್ಲಿ ಏಕ್​ ಪ್ಯಾರ್​ ಕಾ ನಗ್ಮಾ ಹೈ ಹಾಡನ್ನು ಹಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಹಾಗೂ ನೆಟ್ಟಿಗರು ಅತಿಫ್​ ಅಸ್ಲಾಂರ ಈ ಹಾಡಿಗೆ ಫಿದಾ ಆಗಿದ್ದಾರೆ.

ಈ ವಿಡಿಯೋ ಕಮೆಂಟ್​ ಮಾಡಿದ ನೆಟ್ಟಿಗರೊಬ್ಬರು ಸಂಗೀತಕ್ಕೆ ಯಾವುದೇ ಎಲ್ಲೆಯಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು ಅತಿಫ್​ ಅಸ್ಲಾಂರಿಂದ ಅತ್ಯದ್ಭುತವಾದ ಅರ್ಪಣೆ ಎಂದಿದ್ದಾರೆ. ಇದೇ ರೀತಿ ಸಾಕಷ್ಟು ಮಂದಿ ಅತೀಫ್​ ಅಸ್ಲಾಂ ಲತಾ ಮಂಗೇಶ್ಕರ್​​ರಿಗೆ ಸಲ್ಲಿಸಿದ ಶ್ರದ್ಧಾಂಜಲಿಯನ್ನು ಹೊಗಳಿದ್ದಾರೆ.

— S_shah (@shah1_sj) February 13, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...