
ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತೀಫ್ ಲತಾ ಮಂಗೇಶ್ಕರ್ ಫೋಟೋದ ಹಿನ್ನೆಲೆಯಲ್ಲಿ ಏಕ್ ಪ್ಯಾರ್ ಕಾ ನಗ್ಮಾ ಹೈ ಹಾಡನ್ನು ಹಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಹಾಗೂ ನೆಟ್ಟಿಗರು ಅತಿಫ್ ಅಸ್ಲಾಂರ ಈ ಹಾಡಿಗೆ ಫಿದಾ ಆಗಿದ್ದಾರೆ.
ಈ ವಿಡಿಯೋ ಕಮೆಂಟ್ ಮಾಡಿದ ನೆಟ್ಟಿಗರೊಬ್ಬರು ಸಂಗೀತಕ್ಕೆ ಯಾವುದೇ ಎಲ್ಲೆಯಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು ಅತಿಫ್ ಅಸ್ಲಾಂರಿಂದ ಅತ್ಯದ್ಭುತವಾದ ಅರ್ಪಣೆ ಎಂದಿದ್ದಾರೆ. ಇದೇ ರೀತಿ ಸಾಕಷ್ಟು ಮಂದಿ ಅತೀಫ್ ಅಸ್ಲಾಂ ಲತಾ ಮಂಗೇಶ್ಕರ್ರಿಗೆ ಸಲ್ಲಿಸಿದ ಶ್ರದ್ಧಾಂಜಲಿಯನ್ನು ಹೊಗಳಿದ್ದಾರೆ.