ಲೋಹದ ಪಾತ್ರೆಗಳಿಗಿಂತ ತುಂಬಾ ನಾಜೂಕಾಗಿರುವ ಗಾಜಿನ ಪಾತ್ರೆಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಆದರೆ ಇದರ ನಿರ್ವಹಣೆ ಮತ್ತು ಸ್ವಚ್ಛತೆ ತುಂಬಾ ಸೂಕ್ಷ್ಮವಾಗಿರಬೇಕು. ಇಲ್ಲದಿದ್ದರೆ ಒಡೆದು ಹೋಗುವ ಸಾಧ್ಯತೆ ಇರುತ್ತದೆ.
ಕೆಲವೊಂದು ಟಿಪ್ಸ್ ಅನುಸರಿಸಿದರೆ ಈ ಸಾಧ್ಯತೆಯೂ ಕಡಿಮೆ. ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ.
* ಡಿಶ್ ವಾಷರ್‌ನಲ್ಲಿ ಗಾಜಿನ ಲೋಟ, ಪ್ಲೇಟ್, ಬೌಲ್‌ಗಳನ್ನು ಕ್ಲೀನ್ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಆ ಮೆಷಿನ್‌ನಲ್ಲಿ ಹೀಟೆಡ್ ಡ್ರೈಯಿಂಗ್ ಸೈಕಲ್ ಇದ್ದರೆ ಗಾಜಿನ ಪಾತ್ರೆಯನ್ನು ತೊಳೆಯದಿರುವುದೇ ಉತ್ತಮ. ಇದರ ಶಾಖಕ್ಕೆ ಗಾಜು ಒಡೆದು ಹೋಗುವ ಸಾಧ್ಯತೆ ಇದೆ.
‘ಜನರು ಲಸಿಕೆ ಪಡೆಯಬೇಕು ಅಂದರೆ ಸಲ್ಮಾನ್ ಖಾನ್ ಪ್ರೇರೇಪಿಸಬೇಕು’ : ಪಾಲಿಕೆ ಮೇಯರ್ ಹೇಳಿಕೆ
* ಡಿಶ್ ವಾಷರ್‌ನಲ್ಲಿ ಗಾಜಿನ ಪಾತ್ರೆಗಳನ್ನು ಎಚ್ಚರಿಕೆಯಿಂದ ಜೋಡಿಸಿಡಿ. ಪಾತ್ರೆಗಳು ಒಂದಕ್ಕೊಂದು ತಾಗಬಾರದು. ತಾಗಿದರೆ ಅವು ಒಡೆಯುತ್ತವೆ.
* ಕೈಯಲ್ಲಿಯೇ ಗಾಜಿನ ಪಾತ್ರೆ ತೊಳೆಯುವುದಾದರೆ ಒಂದೊಂದನ್ನೇ ತೊಳೆಯುತ್ತಾ ಹೋಗಿ. ಪಾತ್ರೆ ಕೈಯಿಂದ ಜಾರದಂತೆ ನೋಡಿಕೊಳ್ಳಿ. ಹ್ಯಾಂಡಲ್ ಇರುವ ಸ್ಪಾಂಜ್ ಅಥವಾ ಮೃದುವಾದ ಫೋಮ್ ಬ್ರಷ್‌ನಿಂದ ಗಾಜಿನ ಒಳಭಾಗವನ್ನು ತೊಳೆಯಿರಿ.
* ನೀರಿನಿಂದ ಗಾಜನ್ನು ತೊಳೆದ ಮೇಲೆ ಒಣ ಬಟ್ಟೆಯಿಂದ ಅದನ್ನು ಚೆನ್ನಾಗಿ ಒರೆಸಿ ಒಣಗಿಸಿ. ಗಾಜಿನ ಪಾತ್ರೆಗಳನ್ನು ತಣ್ಣಗಿನ ನೀರಿನಲ್ಲಿ ತೊಳೆಯುವುದಕ್ಕಿಂತ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದರೆ ಬೆಸ್ಟ್.
* ಬಿಸಿ ನೀರಿನಿಂದ ಗಾಜಿನ ಪಾತ್ರೆ ತೊಳೆದರೆ ಅದರಲ್ಲಿರುವ ಜಿಡ್ಡು, ಬ್ಯಾಕ್ಟೀರಿಯಾ, ಕೊಳೆ ಇತ್ಯಾದಿಗಳು ಹೋಗುತ್ತವೆ. ಇಂಥ ಪಾತ್ರೆಗಳನ್ನು ಅತ್ಯಂತ ಕಡಿಮೆ ಪ್ರಮಾಣದ ಡಿಟರ್ಜಂಟ್ ಬಳಸಿ ತೊಳೆಯಿರಿ.
ಈ 2 ಕಾರಣಕ್ಕೆ ಹೆಚ್ಚಾಗ್ತಿದೆ ಆತ್ಮಹತ್ಯೆ ಪ್ರಕರಣ….!
* ಗಾಜಿನ ಲೋಟ, ಬೌಲ್‌ಗಳನ್ನು ಬಳಸಿದ ತಕ್ಷಣ ತೊಳೆದು ಬಿಡಿ. ಇಲ್ಲದಿದ್ದರೆ ಅದರಲ್ಲಿ ಟೀ, ಕಾಫಿಯ ಕಲೆಗಳು ಉಳಿದು ಬಿಡುವ ಸಾಧ್ಯತೆ ಇರುತ್ತವೆ. ತಕ್ಷಣಕ್ಕೆ ತೊಳೆದರೆ ಕಲೆ ಮೂಡುವುದಿಲ್ಲ.
* ತೀಕ್ಷ್ಣವಾದ ರಾಸಾಯನಿಕ ವಸ್ತುಗಳಿರುವ ಡಿಟರ್ಜಂಟ್‌ಗಳಿಂದ ಗಾಜಿನ ಪಾತ್ರೆಗಳನ್ನು ತೊಳೆಯುವುದಕ್ಕಿಂತ ವಿನಿಗರ್, ಬೇಕಿಂಗ್ ಸೋಡ ಮತ್ತು ನಿಂಬೆ ರಸ ಮುಂತಾದ ನೈಸರ್ಗಿಕ ವಸ್ತುಗಳಿಂದ ತೊಳೆದರೆ ಉತ್ತಮ.