ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಗರ್ಭಿಣಿಯರು ಅನಾರೋಗ್ಯಕ್ಕೆ ತುತ್ತಾದಲ್ಲಿ ಅದು ಗರ್ಭದಲ್ಲಿರುವ ಶಿಶುವಿನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲವೊಂದು ಸೌಂದರ್ಯ ವರ್ಧಕಗಳಿಂದ ಗರ್ಭಿಣಿಯಾದವರು ದೂರ ಇರುವುದು ಸೂಕ್ತ.
ಕೂದಲಿಗೆ ಹಚ್ಚುವ ಅನೇಕ ಕಂಪನಿಗಳ ಬಣ್ಣದಲ್ಲಿ ಅಮೋನಿಯಾ ಇರುತ್ತದೆ. ಇದು ಶ್ವಾಸಕೋಶ ಹಾಗೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ.
ರಾತ್ರಿ ಚಪಾತಿ ಬದಲು ಸಬ್ಬಕ್ಕಿ ಸೇವಿಸಿ ಪರಿಣಾಮ ನೋಡಿ
ಹಾಗೆ ನೇಲ್ ಪಾಲಿಶ್ ಹಚ್ಚುವುದು ಸೂಕ್ತವಲ್ಲ. ಅದ್ರಲ್ಲಿರುವ ಕೆಮಿಕಲ್ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ ನೇಲ್ ಪಾಲಿಶ್ ನಿಂದ ಗರ್ಭಿಣಿಯರು ದೂರವಿರುವುದು ಒಳ್ಳೆಯದು.
ಕೂದಲು ತೆಗೆಯುವ ಕ್ರೀಂನಲ್ಲಿ ಕೂಡ ಗ್ಲೈಕೊಲಿಕ್ ಆಮ್ಲವಿರುತ್ತದೆ. ಇದು ಗರ್ಭಿಣಿಗೆ ಹಾನಿಯುಂಟು ಮಾಡುವ ಸಾಧ್ಯತೆ ಇರುತ್ತದೆ.