alex Certify ಗರ್ಭಾವಸ್ಥೆಯಲ್ಲಿ ಹೈ ಹೀಲ್ಸ್ ಧರಿಸುವುದು ‘ಅಪಾಯಕಾರಿ’….! ನಿಮ್ಮ ಒಂದು ತಪ್ಪು ಅನೇಕ ಸಮಸ್ಯೆಗಳನ್ನು ಹೆಚ್ಚಿಸಬಹುದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಹೈ ಹೀಲ್ಸ್ ಧರಿಸುವುದು ‘ಅಪಾಯಕಾರಿ’….! ನಿಮ್ಮ ಒಂದು ತಪ್ಪು ಅನೇಕ ಸಮಸ್ಯೆಗಳನ್ನು ಹೆಚ್ಚಿಸಬಹುದು

ಮಹಿಳೆಯರು ಸುಂದರವಾಗಿ ಕಾಣಲು ಹೈ ಹೀಲ್ಸ್ ಧರಿಸ್ತಾರೆ. ಕೆಲವರು  ಗರ್ಭಾವಸ್ಥೆಯಲ್ಲೂ ಹೈ ಹೀಲ್ಸ್ ಹಾಕಿಕೊಂಡುಬಿಡುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿ. ಗರ್ಭಿಣಿಯರು ಅಪ್ಪಿತಪ್ಪಿಯೂ ಹೈಹೀಲ್ಸ್‌ ಧರಿಸಬಾರದು. ಆರೋಗ್ಯ ತಜ್ಞರ ಪ್ರಕಾರ ಎತ್ತರದ ಹಿಮ್ಮಡಿಯುಳ್ಳ ಇಂತಹ ಚಪ್ಪಲಿಗಳು ಗರ್ಭಾವಸ್ಥೆಯನ್ನು ತುಂಬಾ ಕಷ್ಟಕರವಾಗಿಸಬಹುದು. ಇದರ ಹಿಂದೆ ಹಲವು ವೈಜ್ಞಾನಿಕ ಕಾರಣಗಳೂ ಇವೆ. ಗರ್ಭಾವಸ್ಥೆಯಲ್ಲಿ ಹೀಲ್ಸ್ ಧರಿಸುವುದನ್ನು ಏಕೆ ನಿಷೇಧಿಸಲಾಗಿದೆ ಅನ್ನೋದನ್ನು ನೋಡೋಣ.  

ಬೆನ್ನುನೋವಿನ ಸಮಸ್ಯೆ

ಹೈ ಹೀಲ್ಸ್‌ ಧರಿಸುವುದರಿಂದ ದೇಹದ ಭಂಗಿಯು ಹಾಳಾಗುತ್ತದೆ.  ದೀರ್ಘಕಾಲದವರೆಗೆ ಹೀಲ್ಸ್‌ ಹಾಕಿಕೊಂಡಿದ್ದರೆ ಶ್ರೋಣಿಯ ಸ್ನಾಯುಗಳು ಬಾಗುತ್ತವೆ. ಈ ಕಾರಣದಿಂದಾಗಿ ಬೆನ್ನು ಸಹ ಬಾಗುತ್ತದೆ. ರ್ಭಾವಸ್ಥೆಯಲ್ಲಿ ದೇಹದ ತೂಕವು ಬಹಳ ವೇಗವಾಗಿ ಹೆಚ್ಚಾಗುವುದರಿಂದ, ಭಂಗಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ಬೆನ್ನುನೋವಿನ ಸಮಸ್ಯೆ ಪ್ರಾರಂಭವಾಗಬಹುದು. ಗರ್ಭಾವಸ್ಥೆಯಲ್ಲಿ ಹೈಹೀಲ್ಸ್‌ ಧರಿಸುವುದರಿಂದ ಕೆಳ ಬೆನ್ನಿನಲ್ಲಿ ಮತ್ತು ಪಾದಗಳ ಅಸ್ಥಿರಜ್ಜುಗಳಲ್ಲಿ ತೊಂದರೆಗಳು ಉಂಟಾಗಬಹುದು.

ಕಾಲುಗಳಲ್ಲಿ ಸೆಳೆತ

ದೀರ್ಘಕಾಲದವರೆಗೆ ಹೈ ಹೀಲ್ಸ್‌ ಹಾಕಿಕೊಂಡು ಇರುವುದರಿಂದ ಕಾಲುಗಳ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಸ್ನಾಯು ಸೆಳೆತವು ಪ್ರಾರಂಭವಾಗುತ್ತದೆ. ಗರ್ಭಾವಸ್ಥೆಯಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.

ಕಾಲಿನ ಸಮತೋಲನಕ್ಕೆ ಸಮಸ್ಯೆ

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದರಿಂದ ಹಾರ್ಮೋನ್ ಬದಲಾವಣೆಗಳಾಗುತ್ತವೆ. ಇದರಿಂದಾಗಿ ಕಣಕಾಲುಗಳು ದುರ್ಬಲವಾಗುತ್ತವೆ ಮತ್ತು ಸಮತೋಲನದಲ್ಲಿ ತೊಂದರೆ ಉಂಟಾಗುತ್ತದೆ. ಹೀಲ್ಸ್ ಧರಿಸುವುದರಿಂದ ಈ ಸಮಸ್ಯೆ ಉಲ್ಬಣಗೊಳ್ಳಬಹುದು. ಆಯತಪ್ಪಿ ಬೀಳುವ ಸಾಧ್ಯತೆಯೂ ಇರುತ್ತದೆ, ಇದು ತಾಯಿ ಮತ್ತು ಮಗುವಿಗೆ ಅಪಾಯಕಾರಿ.

ಪಾದಗಳಲ್ಲಿ ಊತ

ಗರ್ಭಿಣಿಯರಲ್ಲಿ ಕಾಲುಗಳು, ಕಣಕಾಲುಗಳು ಮತ್ತು ಪಾದಗಳಲ್ಲಿ ಊತವು ತುಂಬಾ ಸಾಮಾನ್ಯ. ಆರಾಮದಾಯಕ ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸದ ಕಾರಣ ಇದು ಸಂಭವಿಸುತ್ತದೆ. ಬಿಗಿಯಾದ ಬೂಟುಗಳು ಮತ್ತು ಹೈ ಹೀಲ್ಸ್‌ ಹಾಕಿಕೊಳ್ಳುವುದರಿಂದ ಇದು ಇನ್ನಷ್ಟು ಹೆಚ್ಚಾಗುತ್ತದೆ.

ಗರ್ಭಪಾತದ ಅಪಾಯ

ಗರ್ಭಾವಸ್ಥೆಯಲ್ಲಿ ಹೈ ಹೀಲ್ಸ್‌ ಅನ್ನು ದೀರ್ಘಕಾಲದವರೆಗೆ ಧರಿಸುವುದು ಅಪಾಯಕಾರಿ. ಇದು ಗರ್ಭಪಾತಕ್ಕೂ ಕಾರಣವಾಗಬಹುದು. ಅದಕ್ಕಾಗಿಯೇ ಮಹಿಳೆಯರು ಗರ್ಭಾವಸ್ಥೆಯಲ್ಲಿ ಹೈ ಹೀಲ್ಸ್ ಧರಿಸುವುದನ್ನು ತಪ್ಪಿಸಬೇಕು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...