alex Certify ಗರ್ಭಾವಸ್ಥೆಯಲ್ಲಿ ಅಪ್ಪಿತಪ್ಪಿಯೂ ಇವನ್ನೆಲ್ಲ ತಿನ್ನಬೇಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಅಪ್ಪಿತಪ್ಪಿಯೂ ಇವನ್ನೆಲ್ಲ ತಿನ್ನಬೇಡಿ….!

ಗರ್ಭಧಾರಣೆ ಮಹಿಳೆಯ ಬದುಕಿನ ಅತ್ಯಂತ ಸುಂದರ ಘಟ್ಟ. ಗರ್ಭಾವಸ್ಥೆಯಲ್ಲಿ ಕೇವಲ ನಮ್ಮ ದೇಹದಲ್ಲಿ ಮಾತ್ರವಲ್ಲ, ನಮ್ಮ ಚಿಂತನೆ, ಅನಿಸಿಕೆ ಎಲ್ಲವೂ ಬದಲಾಗುತ್ತವೆ.

ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಗರ್ಭಿಣಿಯರು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಗರ್ಭಾವಸ್ಥೆಯಲ್ಲಿ ನೀವು ಸೇವಿಸಬಾರದಂತಹ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ.

ಹಸಿ ಮೊಟ್ಟೆ : ಗರ್ಭಾವಸ್ಥೆಯಲ್ಲಿ ಹಸಿ ಮೊಟ್ಟೆಗಳನ್ನು ಸೇವಿಸಬಾರದು. ಅರೆಬರೆ ಬೆಂದ ಮೊಟ್ಟೆಗಳನ್ನು ಕೂಡ ತಿನ್ನುವುದು ಒಳಿತಲ್ಲ. ಹಾಗಾಗಿ ಮನೆಯಲ್ಲೇ ಮಾಡಿದ ಮೆಯೋನೀಸ್ ಗಳನ್ನು ಕೂಡ ಸೇವಿಸಬೇಡಿ.

ಅಲೋವೆರಾ : ತಾಯ್ತನವನ್ನು ಎದುರು ನೋಡುತ್ತಿರುವವರು ಅಲೋವೆರಾವನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಅಲೋವೆರಾ ಮಿಶ್ರಿತ ಪಾನೀಯ ಅಥವಾ ಇತರೆ ಯಾವುದೇ ಆಹಾರವನ್ನು ಸೇವಿಸಬೇಡಿ. ಇದು ಶ್ರೋಣಿಯ ರಕ್ತಸ್ರಾವಕ್ಕೆ ಕಾರಣವಾಗುತ್ತದೆ, ಅದರಿಂದ ಗರ್ಭಪಾತದ ಅಪಾಯ ಕೂಡ ಇದೆ.

ಪಪ್ಪಾಯ : ಗರ್ಭಾವಸ್ಥೆಯಲ್ಲಿ ಇದನ್ನು ತಿನ್ನುವುದು ಒಳ್ಳೆಯದಲ್ಲ. ಅದರಲ್ಲೂ ಪಪ್ಪಾಯ ಕಾಯಿಯ ಪದಾರ್ಥಗಳನ್ನು ತಿಂದರೆ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಪಪ್ಪಾಯ ಕಾಯಿಯಲ್ಲಿರುವ ಕಿಣ್ವ ಗರ್ಭಾಶಯವನ್ನು ಕುಗ್ಗಿಸುತ್ತದೆ, ಇದರಿಂದ ಅಬಾರ್ಷನ್ ಆಗಬಹುದು.

ಅನಾನಸ್ : ಗರ್ಭಾವಸ್ಥೆಯ ಮೊದಲ ಮೂರು ತಿಂಗಳ ಅವಧಿಯಲ್ಲಿ ಅನಾನಸ್ ಹಣ್ಣನ್ನು ತಿನ್ನಬೇಡಿ. ಇದರಲ್ಲಿ ಬ್ರೋಮಲೇನ್ ಇದ್ದು, ಅದು ಗರ್ಭಾಶಯದ ಸ್ನಾಯುವನ್ನು ನಯ ಮಾಡುವ ಸಾಧ್ಯತೆಗಳಿರುತ್ತದೆ, ಇದರಿಂದ ಗರ್ಭಪಾತದ ಅಪಾಯವಿದೆ.

ನುಗ್ಗೆಕಾಯಿ : ಇದು ಗರ್ಭಿಣಿಯರಿಗೆ ಅಪಾಯ ತರುವಂತಹ ತರಕಾರಿ. ಗರ್ಭಾವಸ್ಥೆಯ ಆರಂಭದ ದಿನಗಳಲ್ಲಂತೂ ನುಗ್ಗೆಕಾಯಿ ಸೇವನೆ ಬೇಡವೇ ಬೇಡ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...