ಚಕ್ಕುಲಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ…? ಗರಿ ಗರಿಯಾದ ಚಕ್ಕುಲಿ ಸವಿಯುತ್ತಿದ್ದರೆ ಅದರ ಖುಷಿನೇ ಬೇರೆ. ಇಲ್ಲಿ ರುಚಿಕರವಾದ ರಾಗಿ ಚಕ್ಕುಲಿ ಮಾಡುವ ವಿಧಾನ ಇದೆ. ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ರಾಗಿ ಹಿಟ್ಟು-1 ಕಪ್, ಅಕ್ಕಿ ಹಿಟ್ಟು-1/2 ಕಪ್, ಕಡಲೆಹಿಟ್ಟು-1/4 ಕಪ್, ತುಪ್ಪ-2 ಟೇಬಲ್ ಸ್ಪೂನ್, ಖಾರದ ಪುಡಿ-1 ಟೀ ಸ್ಪೂನ್, ಜೀರಿಗೆ ಕಾಳು-1 ಟೀ ಸ್ಪೂನ್, ಇಂಗು-1/4 ಟೀ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ನೀರು-ಅಗತ್ಯವಿರುವಷ್ಟು, ಎಣ್ಣೆ-ಕರಿಯಲು.
ಒಂದು ಅಗಲವಾದ ಬೌಲ್ ಗೆ ರಾಗಿಹಿಟ್ಟು, ಕಡಲೆಹಿಟ್ಟು, ಅಕ್ಕಿಹಿಟ್ಟು ಇವು ಮೂರನ್ನು ಜರಡಿ ಹಿಡಿದುಕೊಳ್ಳಿ. ನಂತರ ಇದಕ್ಕೆ ಖಾರದ ಪುಡಿ, ಜೀರಿಗೆ, ಉಪ್ಪು, ಇಂಗು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಮೆತ್ತಗಿನ ಮುದ್ದೆ ರೀತಿ ಮಾಡಿಕೊಳ್ಳಿ.
ಒಂದು ಒದ್ದೆ ಬಟ್ಟೆಯ ಸಹಾಯದಿಂದ ಇದನ್ನು ½ ಗಂಟೆಗಳ ಕಾಲ ಮುಚ್ಚಿಡಿ. ಚಕ್ಕುಲಿ ಅಚ್ಚು ತೆಗೆದುಕೊಂಡು ಅದಕ್ಕೆ ಎಣ್ಣೆ ಸವರಿ ಈ ಮಿಶ್ರಣವನ್ನು ಅಚ್ಚಿನೊಳಗೆ ತುಂಬಿ ಕಾದ ಎಣ್ಣೆಯಲ್ಲಿ ಚಕ್ಕುಲಿ ಬಿಟ್ಟು ಎರಡೂ ಕಡೆ ಚೆನ್ನಾಗಿ ಕರಿಯಿರಿ.