ಬೇಕಾಗುವ ಸಾಮಾಗ್ರಿಗಳು: ಮೈದಾ ಹಿಟ್ಟು – 1 ಕಪ್, ಚಿರೋಟಿ ರವಾ – 1 ಕಪ್, ಸಕ್ಕರೆ – 1 ಕಪ್, ಮೊಸರು – 3 ಟೀ ಸ್ಪೂನ್, ಏಲಕ್ಕಿ- 3ರಿಂದ 4, ರುಚಿಗೆ ತಕ್ಕಷ್ಟು ಉಪ್ಪು, ಫುಡ್ ಕಲರ್, ಕರಿಯಲು ಎಣ್ಣೆ, ಸೋಡಾ-ಚಿಟಿಕೆ, ನೀರು.
ಹಲಸಿನಕಾಯಿ ಚಿಪ್ಸ್ ಮಾಡುವ ವಿಧಾನ
ಮಾಡುವ ವಿಧಾನ: ಮೈದಾ ಹಾಗೂ ರವೆ ಹಾಗೂ ಸಕ್ಕರೆಯನ್ನು ಸಮಪ್ರಮಾಣದಲ್ಲಿ ಒಂದು ಪಾತ್ರೆಗೆ ಹಾಕಿ. ಇದಕ್ಕೆ ಕುಟ್ಟಿ ಪುಡಿ ಮಾಡಿದ ಏಲಕ್ಕಿ, ಚಿಟಿಕೆಯಷ್ಟು ಉಪ್ಪು, ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿ. ಇದಕ್ಕೆ 3 ಸ್ಪೂನ್ ನಷ್ಟು ಮೊಸರು ಸೇರಿಸಿ ನೀರು ಹಾಕಿ ಗಂಟಿಲ್ಲದೆ ಕಲಸಿಕೊಳ್ಳಿ. ದೋಸಾ ಹಿಟ್ಟಿನ ಹದವಿರಲಿ, ತುಂಬಾ ದಪ್ಪವಿರಬಾರದು. 5 ನಿಮಿಷ ಹಾಗೆಯೇ ಇಡಿ.
5 ನಿಮಿಷದ ಬಳಿಕ ಈ ಹಿಟ್ಟಿಗೆ ಸ್ವಲ್ಪ ಸೋಡಾ ಹುಡಿ ಸೇರಿಸಿ ಮಿಕ್ಸ್ ಮಾಡಿ. ಕೂಡಲೇ ಸ್ಟೌನಲ್ಲಿ ಬಾಣಲೆ ಇಟ್ಟು ಕರಿಯಲು ಎಣ್ಣೆ ಹಾಕಿ. ಇದು ಬಿಸಿಯಾದ ಕೂಡಲೇ ಹಿಟ್ಟನ್ನು ಎಣ್ಣೆಗೆ ಹಾಕಿ, ಮಧ್ಯಮ ಉರಿಯಲ್ಲಿಟ್ಟು ಚೆನ್ನಾಗಿ ಬೇಯಿಸಿ. ಎರಡೂ ಕಡೆ ಚೆನ್ನಾಗಿ ಬೆಂದಾಗ ಬಣ್ಣ ಬದಲಾಗುತ್ತದೆ. ಕೂಡಲೇ ಸರ್ವಿಂಗ್ ಪ್ಲೇಟ್ ಗೆ ಸ್ಥಳಾಂತರಿಸಿದರೆ ಸವಿಯಲು ರುಚಿಯಾದ ಮಾಲ್ಪುರಿ ಸಿದ್ಧ.