alex Certify ಗಮನಿಸಿ: ಬದಲಾಗಿದೆ ರೈಲಿನಲ್ಲಿ ರಾತ್ರಿ ಪ್ರಯಾಣಕ್ಕಿರುವ ನಿಯಮ, ಇದನ್ನು ತಿಳಿದುಕೊಳ್ಳದಿದ್ರೆ ಕಾದಿದೆ ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಬದಲಾಗಿದೆ ರೈಲಿನಲ್ಲಿ ರಾತ್ರಿ ಪ್ರಯಾಣಕ್ಕಿರುವ ನಿಯಮ, ಇದನ್ನು ತಿಳಿದುಕೊಳ್ಳದಿದ್ರೆ ಕಾದಿದೆ ಸಂಕಷ್ಟ

ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ರಾತ್ರಿ ವೇಳೆ ಪ್ರಯಾಣಿಕರು ಎದುರಿಸುವ ನಿದ್ದೆ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ಪರಿಹರಿಸಲು ಕೆಲವೊಂದು ನಿಯಮಗಳನ್ನು ಮಾಡಿದೆ.

ರಾತ್ರಿ ಪ್ರಯಾಣದ ವೇಳೆ ನೀವು ರೈಲಿನಲ್ಲಿ ಜೋರಾಗಿ ಮೊಬೈಲ್‌ನಲ್ಲಿ ಮಾತನಾಡುವಂತಿಲ್ಲ. ಅಥವಾ ಲೌಡ್‌ ಸ್ಪೀಕರ್‌ನಲ್ಲಿ ಹಾಡು ಕೇಳುವಂತಿಲ್ಲ. ಇಂತಹ ಘಟನೆಗಳಿಂದ ನಿದ್ರಾಭಂಗವಾಗುತ್ತಿದೆ ಎಂಬ ಬಗ್ಗೆ ರೈಲ್ವೆ ಇಲಾಖೆಗೆ ಹಲವು ದೂರುಗಳು ಬಂದಿದ್ದವು. ಹಾಗಾಗಿ ಇನ್ಮುಂದೆ ರಾತ್ರಿ ರೈಲಿನಲ್ಲಿ ಗದ್ದಲ ಎಬ್ಬಿಸುವ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಈ ನಿಯಮವನ್ನು ಸರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ರೈಲ್ವೆ ಇಲಾಖೆ ತನ್ನ ಸಿಬ್ಬಂದಿಗೆ ನೀಡಿದೆ. ಹೊಸ ನಿಯಮಗಳ ಪ್ರಕಾರ, ರೈಲಿನಲ್ಲಿ ಪ್ರಯಾಣಿಕರಿಂದ ಬರುವ ದೂರನ್ನು ಇತ್ಯರ್ಥಗೊಳಿಸುವ ಹೊಣೆಗಾರಿಕೆ ಸಿಬ್ಬಂದಿಯದ್ದು. ಪ್ರಯಾಣಿಕರು ಜೋರಾಗಿ ಮೊಬೈಲ್‌ನಲ್ಲಿ ಮಾತನಾಡುವುದು, ಸಂಗೀತ ಕೇಳುವುದು ಮಾಡುತ್ತಿರುತ್ತಾರೆ.

ಜೊತೆಗೆ ರೈಲ್ವೆ ಬೆಂಗಾವಲು ಪಡೆ ಅಥವಾ ನಿರ್ವಹಣಾ ಸಿಬ್ಬಂದಿ ಕೂಡ ಗಸ್ತು ಸಮಯದಲ್ಲಿ ಜೋರಾಗಿ ಮಾತನಾಡುವ ಸಂದರ್ಭಗಳೂ ಇರುತ್ತವೆ. ರಾತ್ರಿ ಬೋಗಿಯಲ್ಲಿ ಲೈಟ್‌ ಉರಿಸುವ ವಿಚಾರಕ್ಕೆ ಪ್ರಯಾಣಿಕರ ನಡುವೆ ವಾಗ್ವಾದ ನಡೆಯುತ್ತಿತ್ತು. ಇದರಿಂದ ಇತರ ಪ್ರಯಾಣಿಕರ ನಿದ್ದೆ ಕೆಡುತ್ತದೆ. ರಾತ್ರಿ 10 ಗಂಟೆಯ ಬಳಿಕ ರೈಲಿನಲ್ಲಿ ಪ್ರಯಾಣಿಕರು ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುವಂತಿಲ್ಲ. ಜೋರಾಗಿ ಸಂಗೀತ ಕೇಳಬಾರದು.

ರಾತ್ರಿ ದೀಪವನ್ನು ಹೊರತುಪಡಿಸಿ ಎಲ್ಲಾ ಲೈಟ್‌ಗಳನ್ನು ಆಫ್ ಮಾಡುವುದು ಕಡ್ಡಾಯ. ರೈಲಿನಲ್ಲಿ ತಡರಾತ್ರಿಯವರೆಗೂ ಪ್ರಯಾಣಿಕರು ಪರಸ್ಪರ ಮಾತನಾಡಬಾರದು. ತಪಾಸಣೆ ಸಿಬ್ಬಂದಿ, ಆರ್‌ಪಿಎಫ್, ಎಲೆಕ್ಟ್ರಿಷಿಯನ್, ಅಡುಗೆ ಸಿಬ್ಬಂದಿ ಮತ್ತು ನಿರ್ವಹಣಾ ಸಿಬ್ಬಂದಿ ರಾತ್ರಿಯಲ್ಲಿ ಶಾಂತಿಯುತವಾಗಿ ಕೆಲಸ ಮಾಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...