alex Certify ಗಮನಿಸಿ: ಎಲ್ಲವನ್ನೂ ‘ಫ್ರಿಡ್ಜ್’ ನಲ್ಲಿಡೋ ಅಭ್ಯಾಸ ಒಳ್ಳೆಯದಲ್ಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಎಲ್ಲವನ್ನೂ ‘ಫ್ರಿಡ್ಜ್’ ನಲ್ಲಿಡೋ ಅಭ್ಯಾಸ ಒಳ್ಳೆಯದಲ್ಲ…!

Refrigerator Sizes: How to Measure Fridge Dimensions | Whirlpool

ಕೆಲ ವಸ್ತುಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನೋದು ಒಳ್ಳೆಯದಲ್ಲ ಅಂತಾರೆ ತಜ್ಞರು. ಯಾಕಂದ್ರೆ ಕೆಲವು ಪದಾರ್ಥಗಳು ಫ್ರಿಡ್ಜ್ ನಲ್ಲಿಡೋದ್ರಿಂದ ಹೆಚ್ಚು ಬಾಳಿಕೆ ಬರೋಲ್ಲ, ಜೊತೆಗೆ ಅವುಗಳ ರುಚಿ ಕೂಡ ಕೆಟ್ಟು ಹೋಗುತ್ತೆ.

ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿಟ್ರೆ ಈಗಾಗ್ಲೇ ಫ್ರಿಡ್ಜ್ ನಲ್ಲಿದ್ದ ಎಲ್ಲ ಪದಾರ್ಥಗಳು ಕೆಟ್ಟು ಹೋಗುತ್ತವೆ. ನೀವು ಫ್ರಿಡ್ಜ್ ನಲ್ಲಿ ಇಡಲೇಬಾರದಂತಹ ಪದಾರ್ಥಗಳು ಯಾವುವು ಅಂತಾನೋಡೋಣ.

 ಬ್ರೆಡ್ : ಫ್ರಿಡ್ಜ್ ನಲ್ಲಿಟ್ರೆ ಬ್ರೆಡ್ ಒಣಗಿ ಹೋಗುತ್ತದೆ. ಜೊತೆಗೆ ಹಳಸಿ ಹೋಗುತ್ತದೆ. ಬ್ರೆಡ್ ಫ್ರೆಶ್ ಆಗಿ ಇರಬೇಕಂದ್ರೆ ಬ್ರೆಡ್ ಬ್ಯಾಗ್ ಬಳಸಿ.
ಈರುಳ್ಳಿ : ಇದನ್ನು ಯಾವುದೇ ಕಾರಣಕ್ಕೂ ಫ್ರಿಡ್ಜ್ ನಲ್ಲಿಡಬೇಡಿ. ಅದರ ವಾಸನೆ ಇತರ ಪದಾರ್ಥಗಳಿಗೂ ಆವರಿಸಿಕೊಳ್ಳುತ್ತೆ. ಸಲಾಡ್ ಡ್ರಾವರ್ ನಲ್ಲಿ ಹಾಕಿ ಗಾಳಿಯಾಡುವ ಸ್ಥಳದಲ್ಲಿರಿಸಿ.

ಬೆಳ್ಳುಳ್ಳಿ : ಇದನ್ನು ಕೂಡ ಗಾಳಿಯಾಡುವ ಸ್ಥಳದಲ್ಲಿಡುವುದು ಒಳ್ಳೆಯದು. ಫ್ರಿಡ್ಜ್ ನಲ್ಲಿಟ್ರೆ ಬೆಳ್ಳುಳ್ಳಿಯ ತಾಜಾತನ ಹೊರಟುಹೋಗುತ್ತೆ.

 ಟೊಮ್ಯಾಟೊ : ಫ್ರಿಡ್ಜ್ ನಲ್ಲಿ ತಂಪಾಗಿಟ್ರೆ ಟೊಮ್ಯಾಟೊದ ತಾಜಾತನ ಹೊರಟು ಹೋಗುತ್ತದೆ. ಕೊಠಡಿಯ ತಾಪಮಾನದಲ್ಲಿ ಮಾತ್ರ ಟೊಮ್ಯಾಟೋ ರುಚಿ ಸಖತ್ತಾಗಿರುತ್ತೆ.
ಜೇನುತುಪ್ಪ : ಹಾಳಾಗದೇ ಇರುವ ಪದಾರ್ಥ ಅಂದ್ರೆ ಜೇನುತುಪ್ಪ. ಹಾಗಾಗಿ ಅದನ್ನು ಫ್ರಿಡ್ಜ್ ನಲ್ಲಿಡುವ ಅಗತ್ಯವೇ ಇಲ್ಲ.
ಕೇಕ್ : ಸ್ವಲ್ಪ ಕೇಕ್ ಉಳಿದಿದೆ, ಫ್ರಿಡ್ಜ್ ನಲ್ಲಿಟ್ಟು ನಾಳೆ ತಿನ್ನೋಣ ಅಂದ್ಕೋಬೇಡಿ. ಅದನ್ನು ಫ್ರಿಡ್ಜ್ ನಲ್ಲಿಡುವ ಬದಲು ಏರ್ ಟೈಟ್ ಡಬ್ಬದಲ್ಲಿ ಹಾಕಿಡಿ.
 ಕಲ್ಲಂಗಡಿ : ಒಂದು ಇಡೀ ಕಲ್ಲಂಗಡಿಯನ್ನು ಫ್ರಿಡ್ಜ್ ನಲ್ಲಿ ಇಡಬೇಡಿ. ಅದನ್ನು ಕತ್ತರಿಸಿದಾಗ ಒಂದು ತುಂಡು ಉಳಿದಿದ್ರೆ ಅದರ ಸಿಪ್ಪೆ ತೆಗೆದು ಹೋಳು ಮಾಡಿ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಇಡಬಹುದು.
 ಕಾಫಿ : ಕಾಫಿಯನ್ನು ಫ್ರಿಡ್ಜ್ ನಲ್ಲಿಡುವುದು ಸೂಕ್ತವಲ್ಲ. ಇತರ ಪದಾರ್ಥಗಳ ವಾಸನೆಯನ್ನು ಅದು ಹೀರಿಕೊಳ್ಳುತ್ತೆ. ಕಾಫಿಯನ್ನು ಯಾವಾಗಲೂ ಏರ್ ಟೈಟ್ ಕಂಟೇನರ್ ನಲ್ಲೇ ಇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...