alex Certify ಗಮನಿಸಿ: ಆಧಾರ್‌ – ಪಾನ್‌ ಲಿಂಕ್‌ ಮಾಡಲು ಇಂದೇ ಕೊನೆ ದಿನ; ತಪ್ಪಿದ್ದಲ್ಲಿ ಎದುರಾಗಲಿದೆ ಈ ಎಲ್ಲ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಆಧಾರ್‌ – ಪಾನ್‌ ಲಿಂಕ್‌ ಮಾಡಲು ಇಂದೇ ಕೊನೆ ದಿನ; ತಪ್ಪಿದ್ದಲ್ಲಿ ಎದುರಾಗಲಿದೆ ಈ ಎಲ್ಲ ಸಮಸ್ಯೆ

ಈಗಾಗಲೇ ಬಹಳಷ್ಟು ಬಾರಿ ವಿಸ್ತರಣೆ ಕಂಡಿರುವ ಪಾನ್-ಆಧಾರ್‌ ಲಿಂಕಿಂಗ್‌ಗೆ ಇದ್ದ ಡೆಡ್ಲೈನ್‌ ಇಂದು ಕೊನೆಗೊಳ್ಳಲಿದೆ. ನೀವು ನಿಮ್ಮ ಪಾನ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕಿಂಗ್ ಮಾಡಲು ಈಗ 1,000 ರೂ. ಪಾವತಿ ಮಾಡಬೇಕಾಗುತ್ತದೆ.

ಈ ಹಿಂದೆ, ದಂಡ ಕಟ್ಟದೇ ಪಾನ್ – ಆಧಾರ್‌ ಲಿಂಕಿಂಗ್ ಮಾಡಲು ಮಾರ್ಚ್ 31, 2022 ರ ವರೆಗೆ ಡೆಡ್ಲೈನ್ ನೀಡಲಾಗಿತ್ತು. ಇದಾದ ಬಳಿಕ ಜೂನ್ 30, 2022ರವರೆಗೆ 500 ರೂ.ಗಳ ದಂಡ ಪಾವತಿಯೊಂದಿಗೆ ಈ ಲಿಂಕಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಇದಾದ ಬಳಿಕ ಮಾರ್ಚ್ 31, 2023ರವರೆಗೆ 1,000 ರೂ. ದಂಡ ಪಾವತಿಸಿ ಆಧಾರ್‌ ಲಿಂಕಿಂಗ್ ಮಾಡುವ ಅವಕಾಶ ನೀಡಿದ್ದು, ಬಳಿಕ ಜೂನ್ 30, 2023ರ ವರೆಗೆ ವಿಸ್ತರಿಸಲಾಗಿತ್ತು.

ಆನ್ಲೈನ್ ಮೂಲಕ ಪಾನ್ – ಆಧಾರ್‌ ಲಿಂಕಿಂಗ್

ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಜಾಲತಾಣ www.incometaxindiaefiling.gov.inಕ್ಕೆ ಭೇಟಿ ಕೊಟ್ಟು ನೀವು ಆನ್ಲೈನ್ ಮೂಲಕ ಪಾನ್ – ಆಧಾರ್‌ ಲಿಂಕಿಂಗ್ ಮಾಡಬಹುದು. ಈ ವೇಳೆ AY 2023-24 ಆಯ್ಕೆ ಮಾಡಿಕೊಂಡು, Type of Paymentನಲ್ಲಿ other Receipts ಎಂದು ಆಯ್ಕೆ ಮಾಡಿ ‘Continue ಎಂದು ಕ್ಲಿಕ್ ಮಾಡಬೇಕು.

ಆಫ್ಲೈನ್

ನಿಮ್ಮ ಹತ್ತಿರದ ಪಾನ್ ಸೇವಾ ಕೇಂದ್ರ ಅಥವಾ ಆಧಾರ್‌ ಸೇವಾ ಕೇಂದ್ರಕ್ಕೆ ಭೇಟಿ ಕೊಡಿ.

ಎಸ್‌ಎಂಎಸ್ ಲಿಂಕಿಂಗ್

ನಿಮ್ಮ ಪಾನ್ ಹಾಗೂ ಆಧಾರ್‌ ಲಿಂಕಿಂಗ್ ಮಾಡಲು UIDPAN < ಸ್ಪೇಸ್ > < 12-ಅಂಕಿಯ ಆಧಾರ್‌ ಸಂಖ್ಯೆ > < ಸ್ಪೇಸ್ > <10-ಅಂಕಿಯ ಪಾನ್ ಸಂಖ್ಯೆ > ಎಂದು ಟೈಪ್ ಮಾಡಿ 567678 ಅಥವಾ 56161ಕ್ಕೆ ಕಳುಹಿಸಿ.

ಪಾನ್ – ಆಧಾರ್‌ ಲಿಂಕಿಂಗ್‌ ಮಾಡದೇ ಇದ್ದಲ್ಲಿ ಎದುರಾಗಲಿದೆ ಈ ಎಲ್ಲ ಸಮಸ್ಯೆ:

1. ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಗಲ್ಲ.

2. ಬಾಕಿ ಇರುವ ರಿಟರ್ನ್ಸ್‌ನ ಪ್ರಕ್ರಿಯೆ ಆಗಲ್ಲ.

3. ಬಾಕಿ ಇರುವ ರೀಫಂಡ್‌ಗಳು ಬರುವುದಿಲ್ಲ.

4. ಸಮಸ್ಯೆ ಇರುವ ರಿಟರ್ನ್ಸ್ ವಿಚಾರವಾಗಿ ಸಮಸ್ಯೆ ಆಗಬಹುದು.

5. ಪಾನ್ ನಿಷ್ಕ್ರಿಯಗೊಂಡ ಮಂದಿಗೆ ಹೆಚ್ಚಿನ ದರದಲ್ಲಿ ತೆರಿಗೆ ಕಡಿತ ಆಗಬಹುದು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...