alex Certify ಗಮಗಮಿಸುವ ‘ಏಲಕ್ಕಿ’ಯ ಆರೋಗ್ಯಕರ ಪ್ರಯೋಜನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮಗಮಿಸುವ ‘ಏಲಕ್ಕಿ’ಯ ಆರೋಗ್ಯಕರ ಪ್ರಯೋಜನಗಳು

ಚಿಕ್ಕ ಏಲಕ್ಕಿ ಯಾರಿಗೆ ಗೊತ್ತಿಲ್ಲ ಹೇಳಿ.. ಏಲಕ್ಕಿ ಅಂದಾಕ್ಷಣ ಥಟ್ ಅಂತಾ ನೆನಪಾಗೋದು ಅದರಿಂದ ಬರುವ ಸುವಾಸನೆ. ಸಾಕಷ್ಟು ಮಂದಿ ಏಲಕ್ಕಿಯನ್ನು ಅಡುಗೆಗೆ ಬಳಸೋದು ಸುವಾಸನೆಗೆ. ಏಲಕ್ಕಿ ಚಿಕ್ಕದಾದರೂ ಅದರ ಕೆಲಸ ದೊಡ್ಡದು.

ಊಟ ಆದ ನಂತರ ಎಷ್ಟೋ ಮಂದಿ ಏಲಕ್ಕಿಯನ್ನು ತಿನ್ನುತ್ತಾರೆ. ಅದೇ ರೀತಿ ಏಲಕ್ಕಿಯ ನೀರು ಕೂಡ ಮನುಷ್ಯನ ದೇಹಕ್ಕೆ ಹಾಗೂ ಹಲವು ರೋಗಗಳಿಗೆ ರಾಮಬಾಣ ಎನ್ನುವುದು ಹಲವರಿಗೆ ತಿಳಿಯದೇ ಇರುವ ವಿಚಾರ.

ಸಾಮಾನ್ಯವಾಗಿ ಏಲಕ್ಕಿ ತಿನ್ನೋದ್ರಿಂದ ಅಜೀರ್ಣತೆ ಸಮಸ್ಯೆ ನಿವಾರಣೆಯಾಗುತ್ತದೆ. ಈ ಕಾರಣದಿಂದಲೇ ನಮ್ಮ ಪೂರ್ವಜರು ಊಟದ ನಂತರ ಎಲೆ ಅಡಿಕೆ ಜೊತೆಯಲ್ಲಿ ಏಲಕ್ಕಿಯನ್ನು ತಿನ್ನುತ್ತಿದ್ದರು. ಇನ್ನು ಏಲಕ್ಕಿ ಕ್ಯಾನರ್ ರೋಗ ತಡೆಗಟ್ಟುವಲ್ಲಿ ಉಪಕಾರಿಯಾಗುತ್ತದೆ. ಏಲಕ್ಕಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೆ ಅಲ್ಲ ಆಸಿಡಿಟಿಗೂ ಏಲಕ್ಕಿ ರಾಮಬಾಣ.

ಏಲಕ್ಕಿಯಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಗಂಧಕ, ಮೆಗ್ನೇಶಿಯಂ, ಕಬ್ಬಿಣ ಹಾಗೂ ಮ್ಯಾಂಗನೀಸ್ ಇವೆ. ಇವೆಲ್ಲವೂ ಏಲಕ್ಕಿಯ ಆರೋಗ್ಯಕರ ಗುಣಗಳನ್ನು ಹೆಚ್ಚಿಸುತ್ತವೆ.

ಏಲಕ್ಕಿಯನ್ನು ಉತ್ತಮ ಪ್ರತಿಜೀವಕ, ಆ್ಯಂಟಿ ಆಕ್ಸಿಡೆಂಟ್, ಗುಣಕಾರಕ, ಜೀರ್ಣಕಾರಕ, ಮೂತ್ರವರ್ಧಕ, ಕಫ ನಿವಾರಕ, ಪ್ರಚೋದಕವಾಗಿಸುತ್ತದೆ. ಹಾಗೂ ಶಕ್ತಿವರ್ಧಕ ಕೂಡ ಹೌದು.

ಇನ್ನು ಏಲಕ್ಕಿ ನೀರು ಕೂಡ ಮನುಷ್ಯನ ದೇಹಕ್ಕೆ ತುಂಬಾ ಮುಖ್ಯ. ಏಲಕ್ಕಿಯ‌ ನೀರು ತಯಾರಿಸೋದು ಸುಲಭ ವಿಧಾನ. ಏಲಕ್ಕಿಯನ್ನು ಕುದಿಯುವ ನೀರಲ್ಲಿ ಹಾಕಿ ಸ್ವಲ್ಪ ಕುದಿಸಿದರೆ ಸಾಕು. ಏಲಕ್ಕಿ ನೀರು ರೆಡಿ. ಸದ್ಯ ಈ ನೀರು ಕುಡಿಯೋದರಿಂದ ಗಂಟಲಲ್ಲಿ ಆಗುವ ಕಿರಿಕಿರಿ ನಿವಾರಣೆಯಾಗುತ್ತೆ. ಇನ್ನು ಈ ನೀರು ಕುಡಿಯೋದರಿಂದ ಮಲಬದ್ಧತೆ ಬಗೆಹರಿಯುತ್ತದೆ. ಇನ್ನು ಈ ನೀರನ್ನು ಬೆಳಗ್ಗೆ ಕುಡಿಯೋದರಿಂದ ದಿನ ಪೂರ್ತಿ ಉಲ್ಲಾಸದಿಂದ ಇರಬಹುದು. ಇನ್ನು ಬಾಯಲ್ಲಿ ಪದೇ ಪದೇ ಹುಣ್ಣು ಆಗುವವರಿಗೆ ಏಲಕ್ಕಿ ರಾಮಬಾಣ. ಹೀಗೆ ಏಲಕ್ಕಿ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...