ಸಮಯದ ಅಭಾವದಿಂದ ಗಬಗಬ ತಿನ್ನುವ ಅಭ್ಯಾಸ ನಿಮಗಿದೆಯೇ? ಇಂದೇ ಅದನ್ನು ಬಿಟ್ಟುಬಿಡಿ. ಚೆನ್ನಾಗಿ ಅಗಿದು ಜಗಿದು ತಿಂದರೆ ಮಾತ್ರ ತಿಂದದ್ದು ನಿಮ್ಮ ಮೈಗೆ ಹತ್ತುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ.
ತಿನ್ನುವಾಗ ಬಾಯಿಗೆ ರುಚಿಯಾಗುವ ರೀತಿಯಲ್ಲೇ ಮನಸ್ಸಿಗೆ ತೃಪ್ತಿಯಾಗುವುದು ಬಹಳ ಮುಖ್ಯ. ಹಾಗಾಗಿ ಹೊಟ್ಟೆ ತುಂಬುವಷ್ಟು ನಿಧಾನವಾಗಿ ತಿನ್ನಿ. ತಿನ್ನುವ ವಸ್ತುವಿನ ರುಚಿ, ಗಾತ್ರ ಪೌಷ್ಟಿಕಾಂಶದ ಕುರಿತು ಗಮನ ಹರಿಸುವುದನ್ನು ಮರೆಯದಿರಿ.
ಕ್ಯಾಲೊರಿ ಬಗ್ಗೆ ತಲೆಕೆಡಿಸಿಕೊಳ್ಳುವವರು ಅಂದರೆ ದೇಹ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಏನನ್ನು ತಿಂದರೂ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ. ಏನನ್ನೂ ಸೇವಿಸದಿರುವುದು ಆರೋಗ್ಯ ಕೆಡಲು ಕಾರಣವಾಗಬಹುದು. ಹಾಗಾಗಿ ಸ್ವಲ್ಪ ಸ್ವಲ್ಪವೇ ಸೇವಿಸುವುದು ಅತ್ಯುತ್ತಮ ವಿಧಾನ.
ತಿನ್ನುವಾಗ ಅದರಲ್ಲೂ ಮಕ್ಕಳು ಊಟ ಮಾಡುವಾಗ ಟಿವಿ. ಮೊಬೈಲ್ ಕೈಗೆ ಸಿಗದಂತೆ ದೂರವಿಡಿ. ಮೊಬೈಲ್ ನೋಡುತ್ತಾ ಮಕ್ಕಳು ಗಬಗಬನೆ ತಿಂದು ಮುಗಿಸುತ್ತಾರೆ ಎಂಬುದೇನೋ ನಿಜ. ಆದರೆ ಅದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ.