alex Certify ಗಣೇಶನ ಪೂಜೆ ವೇಳೆ ಇರಲಿ ಈ ʼವಸ್ತುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣೇಶನ ಪೂಜೆ ವೇಳೆ ಇರಲಿ ಈ ʼವಸ್ತುʼ

ಗಣೇಶ ಚತುರ್ಥಿ ತಯಾರಿ ಜೋರಾಗಿ ನಡೆದಿದೆ. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿರುವ ಭಾರತೀಯರು ಕೂಡ ಗಣೇಶನ ಆರಾಧನೆಗೆ ತಯಾರಿ ಶುರು ಮಾಡಿದ್ದಾರೆ. ಭಾದ್ರಪದ ಚೌತಿಯಂದು ಎಲ್ಲರ ಮನೆಯಲ್ಲೂ ಗಣೇಶನ ಪೂಜೆ ನಡೆಯುತ್ತದೆ. ಗಣೇಶನನ್ನು ವಿಘ್ನನಾಶಕ ಎಂದು ಕರೆಯಲಾಗುತ್ತದೆ.

ಗಣೇಶನ ಆರಾಧನೆಯಿಂದ ಸಂಕಷ್ಟಗಳು ದೂರವಾಗುತ್ತವೆ. ಆ.31ರಂದು ಈ ಬಾರಿ ಗಣೇಶನ ಹಬ್ಬ ನಡೆಯುತ್ತಿದೆ. ಪ್ರತಿಯೊಂದು ಶುಭ ಕೆಲಸ, ಪೂಜೆ ವೇಳೆ ಮೊದಲು ಗಣೇಶನ ಪೂಜೆ ನಡೆಯುತ್ತದೆ. ಚೌತಿಯಂದು ಗಣೇಶನನ್ನು ಮನೆಗೆ ತಂದು, ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿದ್ರೆ ಎಲ್ಲ ಕಷ್ಟ ದೂರವಾಗುತ್ತದೆ ಎಂದು ನಂಬಲಾಗಿದೆ.

ಗಣೇಶನ ಪೂಜೆ ವೇಳೆ ದೂರ್ವೆಯನ್ನು ಅವಶ್ಯಕವಾಗಿ ಬಳಸಿ. ಗಜಾನನ ದೂರ್ವೆ ಪ್ರಿಯ. ದೂರ್ವೆಯಿಲ್ಲದ ಪೂಜೆ, ಪೂಜೆ ಎನ್ನಿಸಿಕೊಳ್ಳುವುದಿಲ್ಲ.

ಗಣೇಶ ಮೋದಕ ಪ್ರಿಯ. ಗಣೇಶ ಚತುರ್ಥಿಯಂದು ಮೋದಕವನ್ನು ಗಣಪತಿಗೆ ಅರ್ಪಿಸಿದ್ರೆ ದೇವರು ಪ್ರಸನ್ನನಾಗ್ತಾನೆ. ಭಕ್ತರ ಎಲ್ಲ ಆಸೆಯನ್ನು ಈಡೇರಿಸುತ್ತಾನೆ.

ಗಣೇಶನಿಗೆ ಪಂಚಕಜ್ಜಾಯ ಬಹಳ ಪ್ರೀತಿ. ನೈವೇದ್ಯಕ್ಕೆ ಇದನ್ನು ನೀಡಲು ಮರೆಯದಿರಿ. ಅನುಕೂಲಕ್ಕೆ ತಕ್ಕಂತೆ ಸಿಹಿ ತಿಂಡಿಗಳನ್ನು ಮಾಡಿ ಗಣೇಶನಿಗೆ ಅರ್ಪಿಸಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...