
ಸುನಿಲ್ ಕುಮಾರ್ ನಿರ್ದೇಶನದ ರಾಜವರ್ಧನ್ ನಟನೆಯ ಬಹುನಿರೀಕ್ಷಿತ ‘ಗಜರಾಮ’ ಚಿತ್ರಕ್ಕೆ ‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ನಟಿ ತಪಸ್ವಿನಿ ಪೂಣಚ್ಚ ಸೇರ್ಪಡೆಯಾಗಿದ್ದಾರೆ.
ʼಗಜರಾಮʼ ಚಿತ್ರತಂಡ ತಪಸ್ವಿನಿ ಪೂಣಚ್ಚ ಅವರ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಸ್ವಾಗತ ಕೋರಿದ್ದಾರೆ. ಈ ಸಿನಿಮಾ ನಾಯಕಿ ಇವರೇ ಇರಬಹುದು ಎಂಬ ಕುತೂಹಲ ಸಿನಿಪ್ರೇಕ್ಷಕರಲ್ಲಿ ಮೂಡಿದೆ.
ಆಕ್ಷನ್ ಲವ್ ಸ್ಟೋರಿ ಕಥಾಧರಿತ ಈ ಚಿತ್ರಕ್ಕೆ ಲೈಫ್ ಲೈನ್ ಫಿಲ್ಮ್ಸ್ ಬ್ಯಾನರ್ ನಡಿ ನರಸಿಂಹಮೂರ್ತಿ ಬಂಡವಾಳ ಹೂಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಫರ್ನಾಂಡಿಸ್ ಸಹ ನಿರ್ಮಾಪಕರಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜನೆ ನೀಡಲಿದ್ದಾರೆ.
