alex Certify ಗಗನಕ್ಕೇರಿದ ಪೆಟ್ರೋಲ್ – ಡೀಸೆಲ್‌‌ ಬೆಲೆ…! ಹಣ ಉಳಿಸಲು ವಾಹನ ಮಾಲೀಕರಿಗೆ ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಗನಕ್ಕೇರಿದ ಪೆಟ್ರೋಲ್ – ಡೀಸೆಲ್‌‌ ಬೆಲೆ…! ಹಣ ಉಳಿಸಲು ವಾಹನ ಮಾಲೀಕರಿಗೆ ಇಲ್ಲಿದೆ ಟಿಪ್ಸ್

ಕಳೆದೆರಡು ವಾರಗಳಿಂದ ತೀವ್ರವಾಗಿ ಏರುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಿಂದ ಗ್ರಾಹಕರಿಗೆ ಭಾರೀ ಹೊಡೆತ ಬೀಳುತ್ತಿದೆ. ಇಂಧನದ ಮೇಲಿನ ತೆರಿಗೆ ಮೇಲೆ ಕಡಿತ ಮಾಡುವ ಯಾವುದೇ ಲಕ್ಷಣವಿಲ್ಲದ ಕಾರಣ ವಾಹನಗಳ ಮಾಲೀಕರು ಪೆಟ್ರೋಲ್ ಹಾಗೂ ಡೀಸೆಲ್‌ ಮೇಲಿನ ತಮ್ಮ ಖರ್ಚನ್ನು ಉಳಿಸಲು ಉಪಾಯಗಳನ್ನು ಕಂಡುಕೊಳ್ಳಬೇಕಿದೆ.

ಇದಕ್ಕಾಗಿ ಇಲ್ಲಿವೆ ಐದು ಟಿಪ್‌ಗಳು:

1. ಕೋ-ಬ್ರಾಂಡೆಡ್ ಇಂಧನ ಕಾರ್ಡ್‌ಗಳ ಬಳಕೆ

ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಎಚ್‌ಪಿಸಿಎಲ್‌ ಹಾಗೂ ಬಿಪಿಸಿಎಲ್‌ಗಳು ದೊಡ್ಡ ಬ್ಯಾಂಕ್‌ ಗಳೊಂದಿಗೆ ಸಹಯೋಗದಲ್ಲಿ ಇಂಧನಕ್ಕಾಗಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳನ್ನು ತಂದಿವೆ. ಈ ಕಾರ್ಡ್‌ಗಳ ಚಂದಾದಾರರಾಗುವ ಮೂಲಕ ಇಂಧನ ಖರೀದಿಗಳ ಮೇಲೆ ರಿವಾರ್ಡ್ಸ್ ಪಡೆಯಬಹುದಾಗಿದೆ.

2. ಪ್ರೀಪೇಡ್‌ ಇಂಧನ ಕಾರ್ಡ್‌ಗಳ ಬಳಕೆಯಿಂದ

ಕೋ-ಬ್ರಾಂಡೆಡ್‌ ಇಂಧನ ಕಾರ್ಡ್‌ಗಳ ಜೊತೆಗೆ ಪ್ರೀಪೇಡ್‌ ಇಂಧನ ಕಾರ್ಡ್‌ಗಳನ್ನೂ ಸಹ ತೈಲ ಮಾರಾಟಗಾರರು ನೀಡುತ್ತಿದ್ದಾರೆ. ಈ ಕಾರ್ಡ್‌ಗಳಿಂದ ರಿವಾರ್ಡ್‌ ಪಾಯಿಂಟ್‌ಗಳನ್ನು ಪಡೆಯಬಹುದಾಗಿದೆ. ಈ ಕಾರ್ಡ್‌ಗಳ ಮೇಲೆ ಏನಾದರೂ ಪರಿಷ್ಕರಣಾ ಶುಲ್ಕಗಳನ್ನು ವಿಧಿಸಲಾಗುವುದೇ ಎಂದು ಗ್ರಾಹಕರು ಒಮ್ಮೆ ಪರಿಶೀಲಿಸಬೇಕಾಗುತ್ತದೆ.

ಪ್ರತಿ ದಿನವೂ ಒಂದು ‘ಬಾಳೆಹಣ್ಣು’ ತಿನ್ನಿ ಇಷ್ಟೆಲ್ಲಾ ಲಾಭ ಪಡೆಯಿರಿ

3. ಡಿಜಿಟಲ್ ವಾಲೆಟ್‌ಗಳ ಬಳಕೆ

ಡಿಜಿಟಲ್ ವಾಲೆಟ್‌ಗಳಿಂದ ಇಂಧನ ಖರೀದಿ ಮೇಲೆ ಯಾವುದೇ ನಿರ್ದಿಷ್ಟ ರಿವಾರ್ಡ್‌‌ಗಳು ಇಲ್ಲದೇ ಇದ್ದರೂ, ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ವಾಲೆಟ್‌ ಗಳಿಂದ ಖರ್ಚು ಮಾಡಿದಲ್ಲಿ ನೀವು ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯಬಹುದಾಗಿದೆ.

4. ನಿಮ್ಮ ವಾಹನದ ಸೂಕ್ತ ನಿರ್ವಹಣೆಯಿಂದ

ನಿರಂತರವಾಗಿ ಇಂಜಿನ್ ಆಯಿಲ್ ಬದಲಾವಣೆ, ಏರ್‌ ಫಿಲ್ಟರ್‌ಗಳ ಶುದ್ಧಿಕರಣ, ಚಕ್ರಗಳಲ್ಲಿ ಗಾಳಿಯ ಒತ್ತಡವನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳುವಂಥ ಕ್ರಮಗಳಿಂದ ವಾಹನಗಳ ಮೈಲೇಜ್ ಅಲ್ಪವಾದರೂ ಏರಬಹುದು.

ಪುರುಷರ ಲೈಂಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾ ಸೋಯಾ……?

5. ಕೆಟ್ಟ ಚಾಲನಾ ಅಭ್ಯಾಸಗಳನ್ನು ತಪ್ಪಿಸುವುದರಿಂದ

ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಘದ ಅಧ್ಯಯನವೊಂದರ ಪ್ರಕಾರ, ಬೇಜವಾಬ್ದಾರಿ ಚಾಲಕನೊಬ್ಬ 280 ಲೀಟರ್‌ ಪೆಟ್ರೋಲ್‌ನಲ್ಲಿ 1000ಕಿಮೀ ಚಲಿಸಿದರೆ, ಅದೇ ಜವಾಬ್ದಾರಿಯುತ ಚಾಲಕನೊಬ್ಬ ಅಷ್ಟೇ ದೂರವನ್ನು 250ಲೀಟರ್‌ ಪೆಟ್ರೋಲ್‌ನಲ್ಲಿ ಕ್ರಮಿಸಬಲ್ಲ. ಗೇರ್‌-ಕ್ಲಚ್‌ ರೈಡಿಂಗ್ ಸಂದರ್ಭದಲ್ಲಿ ಇಂಜಿನ್‌ ಸ್ವಿಚ್ ಆಫ್ ಮಾಡುವುದು, ತಡವಾಗಿ ಗೇರ್‌ ಬದಲಿಸುವುದು ಹಾಗೂ ಅತಿ ವೇಗದ ಚಾಲನೆಗಳ ಅಭ್ಯಾಸಗಳಿಂದಾಗಿ ವಾಹನಗಳು ಹೆಚ್ಚಾಗಿ ಇಂಧನ ಎಳೆದುಕೊಳ್ಳುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...