alex Certify ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ತಿಂದರೆ ಇಷ್ಟೆಲ್ಲಾ ರೋಗಗಳನ್ನು ಇಡಬಹುದು ದೂರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ತಿಂದರೆ ಇಷ್ಟೆಲ್ಲಾ ರೋಗಗಳನ್ನು ಇಡಬಹುದು ದೂರ…!

ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಅಡುಗೆಗೆ, ಆಯುರ್ವೇದ ಔಷಧದ ರೂಪದಲ್ಲಿ ಬಳಸಲಾಗುತ್ತದೆ. ಬೆಳ್ಳುಳ್ಳಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ಕಾಯಿಲೆಗಳು ಮತ್ತು ಸೋಂಕು ತಗುಲದಂತೆ ತಡೆಗಟ್ಟುವ ಸಾಮರ್ಥ್ಯ ಬೆಳ್ಳುಳ್ಳಿಯಲ್ಲಿದೆ. ಬೆಳ್ಳುಳ್ಳಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

ಕ್ಯಾನ್ಸರ್‌ ತಡೆಗಟ್ಟುವಿಕೆ: ಬೆಳ್ಳುಳ್ಳಿಯಲ್ಲಿ ಎಂಟಿ ಒಕ್ಸಿಡೆಂಟ್, ಉರಿಯೂತ ನಿವಾರಕ ಮತ್ತು ಕಾರ್ಸಿನೋಜೆನಿಕ್ ಗುಣವಿರುವುದರಿಂದ ಬೆಳಗ್ಗೆ ಬೇರೆ ಆಹಾರ ಸೇವಿಸುವ ಮೊದಲು, ಬೆಳ್ಳುಳ್ಳಿಯನ್ನು ಅಗಿದು ತಿನ್ನಬೇಕು. ಹೀಗೆ ಮಾಡುವುದರಿಂದ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಾಗುತ್ತದೆ.

ಮಧುಮೇಹಕ್ಕೆ ಮದ್ದು: ಬೆಳ್ಳುಳ್ಳಿ ಅಲಿಸಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ರೋಗಿಗಳು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 4 ಎಸಳು ಬೆಳ್ಳುಳ್ಳಿಯನ್ನು ತಿನ್ನಬೇಕು.

ತೂಕ ಇಳಿಕೆ: ನೀವು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ತಿನ್ನುವುದರಿಂದ ತೂಕವು ವೇಗವಾಗಿ ಕಡಿಮೆಯಾಗುತ್ತದೆ. ಅಂತಹ ಕೆಲವು ಸಂಯುಕ್ತಗಳು ಇದರಲ್ಲಿ ಕಂಡುಬರುತ್ತವೆ. ಇದು ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಖಿನ್ನತೆ ದೂರವಾಗುತ್ತದೆ: ಬೆಳ್ಳುಳ್ಳಿ ಸೇವನೆಯು ಮಾನಸಿಕ ಆರೋಗ್ಯಕ್ಕೂ ಅಗತ್ಯವಾಗಿದೆ. ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ನಮ್ಮ ಮನಸ್ಸು ಸಮತೋಲನದಲ್ಲಿರುತ್ತದೆ ಮತ್ತು ಖಿನ್ನತೆಯ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಒತ್ತಡವನ್ನು ತಪ್ಪಿಸಲು ಬೆಳ್ಳುಳ್ಳಿಯನ್ನು ತಿನ್ನುವಂತೆ ವೈದ್ಯರು ಕೂಡ ಸಲಹೆ ನೀಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...