alex Certify ಖಾನಾಪುರದ ಹೋಟೆಲ್ ನಲ್ಲಿ ಉಪಹಾರ ಸವಿದ ಆಶಿಶ್ ನೆಹ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾನಾಪುರದ ಹೋಟೆಲ್ ನಲ್ಲಿ ಉಪಹಾರ ಸವಿದ ಆಶಿಶ್ ನೆಹ್ರಾ

ಟೀಮ್ ಇಂಡಿಯಾದ ಮಾಜಿ ಆಟಗಾರ ಆಶಿಶ್ ನೆಹ್ರಾ ಬೆಳಗಾವಿ ಜಿಲ್ಲೆಯ ಖಾನಾಪುರದ ಬಸವೇಶ್ವರ ವೃತ್ತದಲ್ಲಿರುವ ಅಕ್ವಾ ಬ್ಲೂ ಸ್ಕೈ ಹೋಟೆಲ್ ಗೆ ಭೇಟಿ ನೀಡಿ ಉಪಹಾರ ಸವಿದಿದ್ದಾರೆ.

ತಮ್ಮ ಸಂಗಡಿಗರೊಂದಿಗೆ ರಸ್ತೆ ಮಾರ್ಗವಾಗಿ ಗೋವಾದಿಂದ ಮಹಾರಾಷ್ಟ್ರದ ಪುಣೆಗೆ ತೆರಳುತ್ತಿದ್ದ ಅವರು ಮಂಗಳವಾರ ಬೆಳಿಗ್ಗೆ ಮಾರ್ಗ ಮಧ್ಯದಲ್ಲಿ ಸಾಮಾನ್ಯ ಗ್ರಾಹಕರಂತೆ ಈ ಹೋಟೆಲ್ ಗೆ ಭೇಟಿ ನೀಡಿದ್ದರು.

ಅವರನ್ನು ಗುರುತಿಸಿದ ಹೋಟೆಲ್ ಮಾಲೀಕ ಮಹಮ್ಮದ್ ನಂದಗಡಿ ಮಾತನಾಡಿಸಿದ್ದು, ವಿಷಯ ಹಬ್ಬುತ್ತಲೇ ಅಲ್ಲಿದ್ದ ಕ್ರೀಡಾ ಪ್ರೇಮಿಗಳು ಆಶಿಶ್ ನೆಹ್ರಾ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...