ಬಾಗಲಕೋಟೆ: ಗಾಂಧಿ ಕಟ್ಟಿದ ಕಾಂಗ್ರೆಸ್ ಇಂದು ಹಳಿತಪ್ಪಿ ಹೋಗಿದೆ. ಹಳಿತಪ್ಪಿ ತುಕ್ಡೆ ಗ್ಯಾಂಗ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಕಟೀಲ್, ಯಡಿಯೂರಪ್ಪ ಅವರ ಕಣ್ಣೀರಿಗಿಂತ ಖರ್ಗೆ, ಪರಮೇಶ್ವರ್ ಕಣ್ಣೀರು ಹೆಚ್ಚಿದೆ. ಮುಖ್ಯಮಂತ್ರಿ ಮಾಡಲಿಲ್ಲ ಎಂದು ಖರ್ಗೆ, ತನ್ನನ್ನು ಸೋಲಿಸಿದ್ದೀರಿ ಎಂದು ಪರಮೇಶ್ವರ್ ಕಣ್ಣೀರು ಹಾಕಿದ್ದಾರೆ. ಅವರಿಬ್ಬರ ಕಣ್ಣೀರಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ ಎಂದರು.
BREAKING: ‘ಪೆಗಾಸಸ್’ ಪ್ರಕರಣದಲ್ಲಿ ಸುಪ್ರೀಂ ಮಹತ್ವದ ತೀರ್ಮಾನ; ಮೂವರು ಸದಸ್ಯರ ಸಮಿತಿ ರಚಿಸಿದ ಸರ್ವೋಚ್ಚ ನ್ಯಾಯಾಲಯ
ಸಿದ್ದರಾಮಯ್ಯ ಸಿಎಂ ಆಗಲು ಡಿ.ಕೆ.ಶಿವಕುಮಾರ್ ಬಿಡಲ್ಲ, ಡಿ.ಕೆ.ಶಿ ಅಧ್ಯಕ್ಷರಾಗಿ ಮುಂದುವರೆಯಲು ಸಿದ್ದರಾಮಯ್ಯ ಯಾವ ಕಾರಣಕ್ಕೂ ಬಿಡಲ್ಲ. ಸಿಎಂ ಕುರ್ಚಿಗಾಗಿ ಸಿದ್ದು, ಡಿ.ಕೆ.ಶಿ. ಇಬ್ಬರೂ ಟವೆಲ್ ಹಾಕಿ ಕುಳಿತಿದ್ದಾರೆ. ಉಪಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಎರಡು ಹೋಳಾಗುತ್ತೆ ಎಂದು ಹೇಳಿದರು.
ಜೆಡಿಎಸ್ ಬಿಜೆಪಿ ಬಿ ಟೀಂ ಎಂಬ ಕಾಂಗ್ರೆಸ್ ಹೇಳಿಕೆಗೆ ಕಿಡಿಕಾರಿದ ನಳೀನ್ ಕಟೀಲ್, ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಯಾರು ಸ್ವಾಮಿ? ಬಿಬಿಎಂಪಿಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಯಾರು? ಮೈಸೂರು ಪಾಲಿಕೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಯಾರು?. ಕಾಂಗ್ರೆಸ್ ನಲ್ಲಿರುವವರು ಜೆಡಿಎಸ್ ಗೆ ಬರುತ್ತಾರೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಪಕ್ಷ ಬದಲಿಸುತ್ತಿರುತ್ತಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಬಿ ಟೀಂ ಜೆಡಿಎಸ್ ಎಂದು ವಾಗ್ದಾಳಿ ನಡೆಸಿದರು.