ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಕಾರ್ಡ್ ಸುರಕ್ಷತೆಯ ದೃಷ್ಟಿಯಿಂದ ಟೋಕನೈಸೇಷನ್ ವಿಧಾನವನ್ನು ಅನುಸರಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೀರ್ಮಾನಿಸಿದ್ದು ಜುಲೈ 1ರಿಂದ ಇದು ಜಾರಿಗೆ ಬರಲಿದೆ.
ಹೊಸ ನಿಯಮದಂತೆ ಗ್ರಾಹಕರ ಕ್ರೆಡಿಟ್ ಕಾರ್ಡ್ ಡೇಟಾವನ್ನು ಯಾವುದೇ ಸಂಸ್ಥೆ ಅಥವಾ ಪೋರ್ಟಲ್ ತಮ್ಮ ಸರ್ವರ್ ಗಳಲ್ಲಿ ಸಂಗ್ರಹಿಸುವುದನ್ನು ನಿಷೇಧಿಸಲಾಗಿದ್ದು, ಇದರಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದು ತಪ್ಪಿದಂತಾಗುತ್ತದೆ.
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಸುಟ್ಟು ಭಸ್ಮವಾದ ಓಮ್ನಿ
ಕ್ರೆಡಿಟ್ ಕಾರ್ಡ್ ಬಳಕೆದಾರರು ಟೋಕನೈಸೇಶನ್ ವಿಧಾನದ ಮೂಲಕ ಹಣವನ್ನು ಪಾವತಿಸಬಹುದಾಗಿದ್ದು, ಇದರಿಂದ ಡೇಟಾ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಅತ್ಯಂತ ಕಡಿಮೆ ಎನ್ನಲಾಗಿದೆ.