alex Certify ಕ್ರಿಮಿನಲ್‌ ಕೇಸ್‌ ಗಳ ಬಗ್ಗೆ ಟಿವಿ ಚಾನೆಲ್‌ಗಳಲ್ಲಿ ಚರ್ಚೆ…! ಸುಪ್ರೀಂ ಕೋರ್ಟ್‌‌ ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಮಿನಲ್‌ ಕೇಸ್‌ ಗಳ ಬಗ್ಗೆ ಟಿವಿ ಚಾನೆಲ್‌ಗಳಲ್ಲಿ ಚರ್ಚೆ…! ಸುಪ್ರೀಂ ಕೋರ್ಟ್‌‌ ಗರಂ  

ಕ್ರಿಮಿನಲ್ ನ್ಯಾಯಾಲಯಗಳ ಅಂಗಳದಲ್ಲಿರುವ ವಿಷಯಗಳ ಕುರಿತು ಟಿವಿ ಚಾನೆಲ್‌ಗಳಲ್ಲಿ ನಡೆಯುವ ಚರ್ಚೆಗಳು ಕ್ರಿಮಿನಲ್ ನ್ಯಾಯದ ಆಡಳಿತದಲ್ಲಿ ನೇರ ಹಸ್ತಕ್ಷೇಪ ಮಾಡುತ್ತಿರುವುದನ್ನು ಗಮನಿಸಿರುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಅಪರಾಧಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ನಿರ್ಣಾಯಕ ಸಾಕ್ಷ್ಯವಾಗಿದೆಯೇ ಎಂಬುದನ್ನು ನ್ಯಾಯಾಲಯವು ನಿರ್ಧರಿಸಬೇಕು. ಟಿವಿ ಚಾನೆಲ್‌ಗಳನ್ನು ನೋಡಿ ತೀರ್ಮಾನಿಸಬಾರದು ಎಂದು ಜಸ್ಟಿಸ್‌ ಯು.ಯು. ಲಲಿತ್‌ ಹಾಗೂ ಪಿ.ಎಸ್‌. ನರಸಿಂಹ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಕ್ರಿಮಿನಲ್‌ ಪ್ರಕರಣವೊಂದರಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 394ರ ಅಡಿಯಲ್ಲಿ ಶಿಕ್ಷೆಗೊಳಗಾದ ನಾಲ್ವರು ಆರೋಪಿಗಳು ಸಲ್ಲಿಸಿದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.  ವಿಚಾರಣೆ ಸಂದರ್ಭದಲ್ಲಿ ಪ್ಲೇ ಆಗಿರುವ ಡಿವಿಡಿ, ಟ್ರಯಲ್ ಕೋರ್ಟ್‌ನ ತೀರ್ಪಿಗೆ ಆಧಾರವಾಗಿದೆ ಎಂಬುದನ್ನು ಪೀಠ ಗಮನಿಸಿದೆ. ಇದು ಪೊಲೀಸ್ ಅಧಿಕಾರಿಗೆ ತಪ್ಪೊಪ್ಪಿಗೆಯ ಸ್ವರೂಪದ ಹೇಳಿಕೆಗೆ ಸಂಬಂಧಿಸಿದೆ.

ಈ ಹೇಳಿಕೆಗಳನ್ನು ಡಿವಿಡಿಯಲ್ಲಿ ದಾಖಲಿಸಿರುವುದನ್ನು ನ್ಯಾಯಾಲಯ ಗಮನಿಸಿದೆ. ತನಿಖಾ ಸಂಸ್ಥೆ ದಾಖಲಿಸಿರುವ ಡಿವಿಡಿಯಲ್ಲಿ ಹೇಳಲಾದ ಹೇಳಿಕೆಗಳನ್ನು ಉದಯ ಟಿವಿಯಲ್ಲಿ ಪ್ರಸಾರವಾದ “ಪುಟ್ಟ ಮುಟ್ಟ(Putta Mutta)” ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗಿದೆ. ಡಿವಿಡಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದೆ ಎಂದರೆ ಅದರರ್ಥ ಕರ್ತವ್ಯ ಲೋಪ ಮತ್ತು ನ್ಯಾಯದ ಆಡಳಿತದಲ್ಲಿ ನೇರ ಹಸ್ತಕ್ಷೇಪ.

ಅಪರಾಧ ಅಥವಾ ಇನ್ಯಾವುದೇ ಪ್ರಕರಣಗಳಲ್ಲಿ ನಿರ್ಣಾಯಕ ಸಾಕ್ಷ್ಯ ನ್ಯಾಯಾಲಯಕ್ಕೆ ಮಾತ್ರ ಸಲ್ಲಿಕೆಯಾಗಬೇಕು, ಇದು ನಿರ್ಣಯವಾಗುವುದು ಟಿವಿ ಚಾನೆಲ್ ಮೂಲಕ ಅಲ್ಲ. ಟಿವಿಗಳಲ್ಲಿ ನಡೆಯುವ ಇಂತಹ ಚರ್ಚೆಗಳು ನ್ಯಾಯಾಲಯದ ನಿರ್ಣಯದ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಗೆ ಷಡ್ಯಂತ್ರ ರೂಪಿಸಿದ್ದ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್‌ ಭಾವ ಸೂರಜ್‌ಗೆ ಸಂಬಂಧಪಟ್ಟ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಕೇರಳ ಹೈಕೋರ್ಟ್‌ ಈಗಾಗ್ಲೇ ಸುದ್ದಿ ವಾಹಿನಿಗೆ ನಿರ್ಬಂಧ ಹೇರಿದೆ. ತನಿಖೆ ಸಂದರ್ಭದಲ್ಲಿ ಅದಕ್ಕೆ ಸಂಬಂಧಪಟ್ಟ ಮಾಹಿತಿಗಳು, ಸಾಕ್ಷ್ಯಗಳು ಅಥವಾ ಇತರೆ ವಿವರಗಳನ್ನು ತನಿಖಾಧಿಕಾರಿಗಳು ನೇರವಾಗಿ ಕೋರ್ಟ್‌ಗೆ ಸಲ್ಲಿಸಬೇಕೇ ಹೊರತು ಸಾರ್ವಜನಿಕವಾಗಿ ಅದನ್ನು ಬಹಿರಂಗಪಡಿಸುವಂತಿಲ್ಲ ಎಂದು ಸಹ ನ್ಯಾಯಾಲಯ ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...