alex Certify ಕ್ಯಾಮರಾ ನುಂಗಿದ ಟೈಗರ್ ಶಾರ್ಕ್; ಮೀನಿನ ಬಾಯಿ ಒಳಭಾಗ ಕಂಡು ಬೆರಗಾದ ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮರಾ ನುಂಗಿದ ಟೈಗರ್ ಶಾರ್ಕ್; ಮೀನಿನ ಬಾಯಿ ಒಳಭಾಗ ಕಂಡು ಬೆರಗಾದ ನೆಟ್ಟಿಗರು..!

Shark Swallows Man's Camera, Footage Captures Fascinating Glimpse Into Creature's Mouth | Watchಶಾರ್ಕ್‌ ಮೀನಿನ ಬಾಯಿ ಮತ್ತು ಗಂಟಲಿನ ಒಳಭಾಗವು ಹೇಗೆ ಕಾಣುತ್ತದೆ ಎಂಬ ವಿಡಿಯೋವು ಕ್ಯಾಮರಾದಲ್ಲಿ ಸೆರೆಯಾಗಿದೆ.

ಸ್ವಿಟ್ಜರ್ಲೆಂಡ್ ಮೂಲದ ಛಾಯಾಗ್ರಾಹಕ ಮತ್ತು ಸಂರಕ್ಷಣಾ ತಜ್ಞರು ಈ ಅದ್ಭುತವಾದ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಟೈಗರ್ ಶಾರ್ಕ್ 360 ಡಿಗ್ರಿ ಕ್ಯಾಮರಾವನ್ನು ನುಂಗಿದಾಗ ಅದರ ಬಾಯಿ ಮತ್ತು ಗಂಟಲಿನ ಆಕರ್ಷಕ ದೃಶ್ಯವನ್ನು ಕ್ಯಾಪ್ಚರ್ ಮಾಡಲಾಗಿದೆ.

ಚಲನಚಿತ್ರ ನಿರ್ಮಾಪಕ ಮತ್ತು ಸಂರಕ್ಷಣಾವಾದಿ ಝಿಮಿ ಡಾ ಕಿಡ್ ಮಾಲ್ಡೀವ್ಸ್‌ನಲ್ಲಿ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸುತ್ತಿದ್ದಾಗ, ಟೈಗರ್ ಶಾರ್ಕ್ ಅವರ ಸುತ್ತಲೂ ಸುಳಿದಾಡಿದೆ. ಈ ವೇಳೆ ಅವರ 360-ಡಿಗ್ರಿ ಕ್ಯಾಮರಾವನ್ನು ನುಂಗಲು ಪ್ರಯತ್ನಿಸಿದೆ. ಶಾರ್ಕ್ ಮುಂದೆ ಬಂದು ಕ್ಯಾಮರಾವನ್ನು ಕಚ್ಚುವುದನ್ನು ವಿಡಿಯೋದಲ್ಲಿ ನೋಡಬಹುದು.

ಬೆರಗುಗೊಳಿಸುವ ವಿಡಿಯೋ ಶಾರ್ಕ್ ಮೀನಿನ ಬಾಯಿಯ ಒಳಭಾಗವನ್ನು ಸೆರೆಹಿಡಿದಿದೆ. ಅದರ ದೊಡ್ಡ ಹಲ್ಲುಗಳು, ಗಂಟಲುಗಳು ಮತ್ತು ಕಿವಿರುಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಕ್ಯಾಮರಾ ಸೇವನೆಗೆ ಯೋಗ್ಯವಲ್ಲ ಎಂದು ಶಾರ್ಕ್ ಅರಿತುಕೊಂಡಾಗ, ಅದು ಅಂತಿಮವಾಗಿ ಅದನ್ನು ಉಗುಳಿದೆ. ಅದೃಷ್ಟವಶಾತ್, ಕ್ಯಾಮರಾ ಉಪಕರಣಗಳಿಗೆ ಹೆಚ್ಚಿನ ಹಾನಿ ಸಂಭವಿಸಲಿಲ್ಲ.

ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಆ ಕ್ಷಣದಲ್ಲಿ ಈ ಕುತೂಹಲಕಾರಿ ಟೈಗರ್ ಶಾರ್ಕ್ ತನ್ನ ಇನ್ಸ್ಟಾ 360 ಕ್ಯಾಮರಾದ ರುಚಿ ನೋಡಲು ನಿರ್ಧರಿಸಿತು ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಧೂಳೆಬ್ಬಿಸಿದ್ದು, ಶಾರ್ಕ್ ಮೀನಿನ ಬಾಯಿಯ ಒಳಭಾಗ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...