alex Certify ಕ್ಯಾಮರಾಗೆ ಸೆರೆಸಿಕ್ಕಿದೆ ರಾಯಲ್‌ ಎನ್‌ಫೀಲ್ಡ್‌ ಹೊಸ ಬೈಕ್‌ನ ಮೊದಲ ಝಲಕ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮರಾಗೆ ಸೆರೆಸಿಕ್ಕಿದೆ ರಾಯಲ್‌ ಎನ್‌ಫೀಲ್ಡ್‌ ಹೊಸ ಬೈಕ್‌ನ ಮೊದಲ ಝಲಕ್‌…!

ರಾಯಲ್‌ ಎನ್‌ಫೀಲ್ಡ್‌ ಅಂದಾಕ್ಷಣ ಬೈಕ್‌ ಪ್ರಿಯರು ಹೊಸ ಮಾಡೆಲ್‌ ಬಿಡುಗಡೆಯ ನಿರೀಕ್ಷೆಯಲ್ಲಿರುತ್ತಾರೆ. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿರುವ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ 450 ಬೈಕ್‌ನ ಟೀಸರ್‌ ಅನ್ನು ಕಂಪನಿ ಇತ್ತೀಚೆಗೆ ಬಿಡುಗಡೆ ಮಾಡಿತ್ತು.

ಇದೀಗ ರಾಯಲ್‌ ಎನ್‌ಫೀಲ್ಡ್‌ನ ಮತ್ತೊಂದು ಬೈಕ್‌ ಪ್ರೊಡಕ್ಷನ್‌ ಹಂತದಲ್ಲಿದೆ. ರಾಯಲ್‌ ಎನ್‌ಫೀಲ್ಡ್‌ ಸೂಪರ್‌ ಮೀಟರ್‌ 650 ಬೈಕ್‌ ಸದ್ಯದಲ್ಲೇ ರಸ್ತೆಗಿಳಿಯುವ ನಿರೀಕ್ಷೆಯಿದೆ. ಯುಟ್ಯೂಬ್‌ ವಿಡಿಯೋ ಒಂದರಲ್ಲಿ ಬೈಕ್‌ನ ಮೊದಲ ಝಲಕ್‌ ನೋಡಲು ಸಿಕ್ಕಿದೆ.

ಟ್ರಾಫಿಕ್‌ ಸಿಗ್ನಲ್‌ ಒಂದರಲ್ಲಿ ಇದನ್ನು ಸೆರೆಹಿಡಿಯಲಾಗಿದೆ. ಈ ಬೈಕ್‌ ಮೀಟರ್‌ 350ಗಿಂತ ಉದ್ದವಾಗಿ, ಅಗಲವಾಗಿದೆ. ಫ್ಯೂಯೆಲ್‌ ಟ್ಯಾಂಕ್‌ ಅನ್ನು ಇನ್ನೂ ಸ್ಟೈಲಿಶ್‌ ಆಗಿ ವಿನ್ಯಾಸ ಮಾಡಲಾಗಿದೆ. ಅದರ ಮೇಲ್ಭಾಗದಲ್ಲೇ ಎಲ್‌ಇಡಿ ಲ್ಯಾಂಪ್‌ ಅನ್ನು ಅಳವಡಿಸಲಾಗಿದೆ. ಇನ್ನೂ ಸಾಕಷ್ಟು ವೈಶಿಷ್ಟ್ಯಗಳನ್ನು ಈ ಬೈಕ್‌ ಹೊಂದಿದ್ದು, ಇದು ಮಾರುಕಟ್ಟೆಗೆ ಬರೋದನ್ನೇ ಬೈಕ್‌ ಪ್ರಿಯರು ಕಾಯ್ತಿದ್ದಾರೆ.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...