ತನ್ನನ್ನು ತಾನು ವಿದೇಶಿ ಎಂದು ಹೇಳಿಕೊಂಡ ಮಹಿಳೆಯು ಗುರುಗಾಂವ್ನಲ್ಲಿ ಕ್ಯಾಬ್ ಚಾಲಕನಿಗೆ ಚಾಕುವಿನಿಂದ ಇರಿದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗುರ್ಗಾಂವ್ನ ರಾಜೀವ್ ಚೌಕ್ನಲ್ಲಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ಕೃತ್ಯ ಎಸಗಿದ ಬಳಿಕ ಬುರ್ಖಾಧಾರಿ ಮಹಿಳೆಯು ಸ್ಥಳದಿಂದ ಕಾಲ್ಕೀಳಲು ಯತ್ನಿಸಿದ್ದಾಳೆ. ಆದರೆ ಪೊಲೀಸರು ಆಕೆಯನ್ನು ಬೆನ್ನಟ್ಟಿದ್ದಾರೆ.
ಪೊಲೀಸರು ಹಿಡಿದ ಬಳಿಕ ತನ್ನನ್ನು ತಾನು ಈಜಿಪ್ಟ್ನವಳು ಎಂದು ಹೇಳಿಕೊಂಡ ಮಹಿಳೆಯು ತನ್ನ ಮಾತೃಭಾಷೆಯಲ್ಲಿ ಕೂಗಲು ಆರಂಭಿಸಿದಳು. ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬುರ್ಖಾಧಾರಿ ಮಹಿಳೆಯು ಮಹಿಳಾ ಪೊಲೀಸ್ಗೆ ಗುದ್ದುವುದು ಹಾಗೂ ಅಮಾನುಷವಾಗಿ ವರ್ತಿಸುವುದನ್ನು ಕಾಣಬಹುದಾಗಿದೆ.
ಶಂಕಿತ ಮಹಿಳೆಯನ್ನು ಸಿವಿಲ್ ಲೈನ್ಸ್ ಠಾಣೆಗೆ ಕರೆದೊಯ್ಯಲಾಗಿದೆ. ಇಲ್ಲಿ ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಆದರೆ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುವವರೆಗೂ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.
ಈ ಮಹಿಳೆಯಿಂದ ಯಾವುದೇ ಪಾಸ್ಪೋರ್ಟ್ ಅಥವಾ ವೀಸಾ ಲಭ್ಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಕೆಗೆ ಹಿಂದಿ ಅಥವಾ ಇಂಗ್ಲೀಷ್ ಭಾಷೆ ಅರ್ಥವಾಗದ ಕಾರಣ ಈಕೆಯ ವಿಚಾರಣೆ ನಡೆಸಲು ಟ್ರಾನ್ಸ್ಲೇಟರ್ಗಾಗಿ ಹುಡುಕಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.