alex Certify ಕ್ಯಾನ್ಸರ್​ ಪೀಡಿತ ಅಮ್ಮನ ಕೊನೆ ಆಸೆ ಈಡೇರಿಸಿದ ಮಗ; ಭಾವುಕರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್​ ಪೀಡಿತ ಅಮ್ಮನ ಕೊನೆ ಆಸೆ ಈಡೇರಿಸಿದ ಮಗ; ಭಾವುಕರಾದ ನೆಟ್ಟಿಗರು

`ಅಮ್ಮ` ಅಂದ್ರೆ ಸಾಕು ಮಕ್ಕಳಿಗೆ ಸರ್ವಸ್ವ. ಅದೇ ರೀತಿ ಮಕ್ಕಳಿಗೂ ಅಮ್ಮ ಅಂದ್ರೆ ಪ್ರಪಂಚ. ಅದು ಈ ಮಾತು ಮನುಷ್ಯರಿಗಷ್ಟೇ ಅನ್ವಯವಾಗುವುದಿಲ್ಲ. ಪ್ರಾಣಿಗಳಿಗೂ ಅನ್ವಯವಾಗುತ್ತೆ.

ಅಮ್ಮಂದಿರು ಹೇಗೆ ಮಕ್ಕಳಿಗೆ ಏನು ಬೇಕಾದ್ರೂ ಮಾಡೋದಕ್ಕೆ ಸಿದ್ಧವಾಗಿರ್ತಾರೋ, ಅದೇ ರೀತಿ ಮಕ್ಕಳು ಕೂಡಾ ಅಮ್ಮನಿಗಾಗಿ ಏನು ಬೇಕಾದ್ರೂ ಮಾಡ್ತಾರೆ ಅನ್ನೋದಕ್ಕೆ ಇತ್ತೀಚೆಗೆ ವೈರಲ್ ಆಗಿರೋ ವಿಡಿಯೋ ನೋಡ್ತಿದ್ರೆ ಗೊತ್ತಾಗುತ್ತೆ.

ಎಂಥವರನ್ನೂ ಭಾವುಕರನ್ನಾಗಿ ಮಾಡುವ ವಿಡಿಯೋ ಇದಾಗಿದೆ. ಇದರಲ್ಲಿ ಮಗ ತನ್ನ ಅಮ್ಮನ ಕೊನೆಯ ಆಸೆ ಹೇಗೆ ಈಡೇರಿಸುತ್ತಾನೆ ಅನ್ನೋ ಕೆಲವೇ ಕೆಲವು ನಿಮಿಷದ ವಿಡಿಯೋ ಇದು. ಈ ವಿಡಿಯೋ ನೋಡಿ ನೆಟ್ಟಿಗರ ಕಣ್ಣಂಚು ಒದ್ದೆಯಾಗಿದೆ. ಈ ವಿಡಿಯೋವನ್ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಶೇರ್ ಮಾಡಿಕೊಂಡಿದ್ದಾರೆ.

ಸ್ಟೆಫನಿ ನಾರ್ತ್ಕಾಟ್ ಎರಡು ವರ್ಷಗಳ ಹಿಂದೆ ಟರ್ಮಿನಲ್ ಕ್ಯಾನ್ಸರ್​ಗೆ ತುತ್ತಾಗಿದ್ದಾರೆ. ಮಗನ ಪದವಿ ಪಡೆಯುತ್ತಿರುವುದನ್ನ ನೋಡಬೇಕೆಂಬುದು ತಾಯಿಯ ಕೊನೆ ಆಸೆಯಾಗಿರುತ್ತೆ. ಆ ಆಸೆಯನ್ನ ಈಡೇರಿಸುವುದಕ್ಕಾಗಿ, ಮಗ ಡಾಲ್ಟನ್ ಅತ್ಯಂತ ವಿಶಿಷ್ಟ ರೀತಿಯಲ್ಲಿ ಪ್ಲಾನ್​ ಮಾಡಿದ್ಧಾನೆ. ಸ್ನೇಹಿತರು, ಕುಟುಂಬ ಮತ್ತು ಅವರ ಶಿಕ್ಷಕರ ಸಹಾಯದಿಂದ, ಡಾಲ್ಟನ್ ತನ್ನ ತಾಯಿಗೆ ಆಸ್ಪತ್ರೆಯ ಪ್ರಾರ್ಥನಾ ಮಂದಿರದಲ್ಲಿ ಸಣ್ಣ ಪದವಿ ಸಮಾರಂಭವನ್ನು ಆಯೋಜಿಸಿದ್ದಾನೆ.

ಅಲ್ಲಿಗೆ ಅಮ್ಮನನ್ನ ಕರೆತಂದು ತಾನು ಪದವಿ ಪಡೆಯುತ್ತಿರುವುದನ್ನ ಅಮ್ಮ ಕಣ್ಣಾರೆ ನೋಡುವಂತೆ ಮಾಡಿದ್ದಾನೆ. ಮಗ ತನಗಾಗಿ ಮಾಡಿದ್ದ ಆ ಕಾರ್ಯಕ್ರಮ ನೋಡಿ ತಾಯಿ ಭಾವುಕರಾಗಿದ್ದಾರೆ. ಆ ನಂತರ ಕೊನೆಯಲ್ಲಿ ಅವನು ತನ್ನ ತಾಯಿಯೊಂದಿಗೆ ನೃತ್ಯ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಡಾಲ್ಟನ್​ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನ ಶೇರ್ ​ಮಾಡಿಕೊಂಡಿದ್ದಾರೆ. ಈಗಾಗಲೇ ಈ ವಿಡಿಯೊವನ್ನು 90 ಸಾವಿರ ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇನ್ನೂ ಸಾವಿರಾರು ಜನರು ಲೈಕ್ ಕೂಡಾ ಕೊಟ್ಟಿದ್ದಾರೆ ಅಷ್ಟೇ ಅಲ್ಲ ನೆಟ್ಟಿಗರು ಈ ವಿಡಿಯೋ ನೋಡಿ `ಅಮ್ಮನಿಗೆ ಮಗ ಕೊಟ್ಟ ಅಪರೂಪದ ಕಾಣಿಕೆ` ಅಂತ ಕಾಮೆಂಟ್ ಹಾಕಿದ್ದಾರೆ.

ಇನ್ನೂ ಒಬ್ಬರು “ಇದೊಂದು ಅದ್ಭುತ ಕ್ಷಣ“ ಅಂತ ಭಾವುಕರಾಗಿ ಹೇಳಿದ್ಧಾರೆ. “ಭಾರತದಲ್ಲಿ ಮಾತ್ರ ಅಲ್ಲ ವಿದೇಶದಲ್ಲಿರೋ ಮಕ್ಕಳು ಕೂಡ ಅಮ್ಮನಿಗಾಗಿ ಏನು ಬೇಕಾದ್ರೂ ಮಾಡುತ್ತಾರೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.’’ ಅನ್ನೊ ಕಾಮೆಂಟ್ ಕೂಡಾ ಹಾಕಿದ್ದಾರೆ.

— Awanish Sharan (@AwanishSharan) June 26, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...