alex Certify ಕೋವಿಶೀಲ್ಡ್‌ – ಕೋವ್ಯಾಕ್ಸಿನ್ ಗಳಲ್ಲಿ ಯಾವುದು ಬೆಸ್ಟ್…?‌ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಶೀಲ್ಡ್‌ – ಕೋವ್ಯಾಕ್ಸಿನ್ ಗಳಲ್ಲಿ ಯಾವುದು ಬೆಸ್ಟ್…?‌ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವ್ಯಾಕ್ಸಿನ್‌ನ ಎರಡು ಡೋಸ್‌ಗಳಿಗಿಂತ ಕೋವಿಶೀಲ್ಡ್‌ನ ಎರಡು ಡೋಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ಕೊಡುತ್ತವೆ ಎಂದು ಭಾರತದ ಆರೋಗ್ಯ ಕಾರ್ಯಕರ್ತರ ಮೇಲೆ ಮಾಡಲಾದ ಅಧ್ಯಯನವೊಂದು ತಿಳಿಸುತ್ತಿದೆ.

ಆನ್ಲೈನ್ ಭಂಡಾರವಾದ MedrXivನಲ್ಲಿ ಕಂಡುಬಂದ ಈ ವರದಿಯು, ಭಾರತದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮದ ಕುರಿತಂತೆ ಲಭ್ಯವಿರುವ ಕೆಲವೇ ಅಧ್ಯಯನ ವರದಿಗಳಲ್ಲಿ ಒಂದಾಗಿದೆ.

ದೇಶದ 13 ರಾಜ್ಯಗಳು ಹಾಗೂ 22 ನಗರಗಳಲ್ಲಿ ಲಸಿಕೆಯ ಕುರಿತಾಗಿ ವೈದ್ಯರ ಪ್ರತಿಕ್ರಿಯೆಗಳನ್ನು ಕ್ರೋಢೀಕರಿಸಿ ಅಧ್ಯಯನ ನಡೆಸಲಾಗಿದೆ.

ಎರಡೂ ರೀತಿಯ ಲಸಿಕೆ ಪಡೆದ ಒಟ್ಟು 515 ಮಂದಿಯಲ್ಲಿ (305 ಪುರುಷರು, 210 ಮಹಿಳೆಯರು), 95% ಮಂದಿ ಸೆರೋಪಾಸಿಟಿವಿಟಿ ಬೆಳೆಸಿಕೊಂಡಿದ್ದಾರೆ. ಒಟ್ಟಾರೆ ಸ್ಪೈಕ್ ಪ್ರೋಟೀನ್‌ ರೋಗನಿರೋಧಕ ಕ್ಷಮತೆಯು ಕೋವಿಶೀಲ್ಡ್‌ ಪಡೆದವರಲ್ಲಿ ಹೆಚ್ಚಾಗಿ ಕಂಡುಬಂದಿದೆ.

ಕೋವ್ಯಾಕ್ಸಿನ್‌ ಪಡೆದವರಲ್ಲಿ ಕೋವಿಡ್‌ ಸೋಂಕಿಗೆ ಮತ್ತೆ ಈಡಾಗುವ ಸಾಧ್ಯತೆ ಕಡಿಮೆ ಎಂದು ಕಂಡುಬಂದಿದೆ. ಎರಡೂ ಲಸಿಕೆಗಳಲ್ಲಿ ಅಡ್ಡಪರಿಣಾಮಗಳ ಸಾಧ್ಯತೆ ಒಂದೇ ಆಗಿದ್ದು, ಯಾವುದೇ ರೀತಿಯ ತೀವ್ರ ಅಡ್ಡಪರಿಣಾಮದ ಸಾಧ್ಯತೆಗಳು ಕಂಡುಬಂದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...