alex Certify ಕೋವಿಶೀಲ್ಡ್​ ಬೂಸ್ಟರ್​​ ಡೋಸ್​ ʼಓಮಿಕ್ರಾನ್ʼ​ ವಿರುದ್ಧ ಪರಿಣಾಮಕಾರಿ: ಆಕ್ಸ್​​ಫರ್ಡ್ ಅಧ್ಯಯನದಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಶೀಲ್ಡ್​ ಬೂಸ್ಟರ್​​ ಡೋಸ್​ ʼಓಮಿಕ್ರಾನ್ʼ​ ವಿರುದ್ಧ ಪರಿಣಾಮಕಾರಿ: ಆಕ್ಸ್​​ಫರ್ಡ್ ಅಧ್ಯಯನದಲ್ಲಿ ಬಹಿರಂಗ

ಆಸ್ಟ್ರೆಜೆನಿಕಾದ ಕೋವಿಶೀಲ್ಡ್​ ಮೂರು ಡೋಸ್​ ಕೋವಿಡ್​ ಲಸಿಕೆಯು ಒಮಿಕ್ರಾನ್​ ಕೊರೊನಾ ರೂಪಾಂತರಿಯ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಪ್ರಾಯೋಗಿಕ ಅಧ್ಯಯನ ಡೇಟಾಗಳನ್ನು ಉಲ್ಲೇಖಿಸಿ ಔಷಧ ತಯಾರಕ ಕಂಪನಿಯೊಂದು ಹೇಳಿಕೆ ನೀಡಿದೆ.

ಅಧ್ಯಯನದ ವರದಿಯು ಇನ್ನಷ್ಟೇ ಮೆಡಿಕಲ್​ ಜರ್ನಲ್​ನಲ್ಲಿ ಪ್ರಕಟವಾಗಬೇಕಿದೆ. ಕೋವಿಡ್ 19ನಿಂದ ಸೋಂಕಿಗೆ ಒಳಗಾಗಿ ಸ್ವಾಭಾವಿಕವಾಗಿ ಚೇತರಿಸಿಕೊಂಡ ವ್ಯಕ್ತಿಗಿಂತ ಹೆಚ್ಚಾಗಿ ಬೂಸ್ಟರ್​ ಶಾಟ್​ ಪಡೆದ ವ್ಯಕ್ತಿಯಲ್ಲಿಯೇ ಆ್ಯಂಟಿಬಾಡಿಗಳು ಇರುತ್ತವೆ ಎಂದು ಈ ಅಧ್ಯಯನವು ಹೇಳಿದೆ.

ಎರಡು ಡೋಸ್​ ಕೊರೊನಾ ಲಸಿಕೆಯು ಹೇಗೆ ಡೆಲ್ಟಾ ರೂಪಾಂತರಿಯ ವಿರುದ್ಧ ಪರಿಣಾಮಕಾರಿಯಾಗಿತ್ತೋ ಅದೇ ರೀತಿಯಲ್ಲಿ ಮೂರು ಡೋಸ್​ ಕೊರೊನಾ ಲಸಿಕೆಯು ಓಮಿಕ್ರಾನ್​ ರೂಪಾಂತರಿಯನ್ನು ತಟಸ್ಥಗೊಳಿಸಲು ಸಹಕಾರಿ ಎಂದು ಹೇಳಲಾಗಿದೆ.

ಈ ವಿಚಾರವಾಗಿ ಮಾಹಿತಿ ನೀಡಿದ ಆಂಗ್ಲೋ- ಸ್ವೀಡಿಷ್​ ಔಷಧಿ ತಯಾರಕರು, ಈ ಅಧ್ಯಯನವನ್ನು ನಡೆಸಿದ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರು ಲಸಿಕೆಯ ತಯಾರಕರೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...