alex Certify ಕೋವಿಡ್ ಲಸಿಕೆ ಬದಲು ಮೂತ್ರ ಕುಡಿಯಿರಿ ಎಂದ ವ್ಯಾಕ್ಸಿನ್ ವಿರೋಧಿ ನಾಯಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ ಬದಲು ಮೂತ್ರ ಕುಡಿಯಿರಿ ಎಂದ ವ್ಯಾಕ್ಸಿನ್ ವಿರೋಧಿ ನಾಯಕ..!

ಕೋವಿಡ್ -19 ಸಾಂಕ್ರಾಮಿಕ ರೋಗ ಜಗತ್ತನ್ನು ಆವರಿಸಿ ಎರಡು ವರ್ಷಗಳೇ ಕಳೆದಿವೆ. ಇದರ ವಿರುದ್ಧ ವಿಶ್ವದಾದ್ಯಂತ ಕೋವಿಡ್ ಲಸಿಕೆ ಹಾಕಿಸಲಾಗುತ್ತಿದ್ದು, ಅಸಂಖ್ಯಾತ ಮಂದಿ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಇನ್ನೂ ಕೂಡ ಹಿಂದೇಟು ಹಾಕುತ್ತಿದ್ದಾರೆ.

ಲಸಿಕಾ ವಿರೋಧಿಗಳು ವ್ಯಾಕ್ಸಿನ್ ಪಡೆಯುವುದನ್ನು ತಪ್ಪಿಸಲು ಯಾವ ಹಂತಕ್ಕಾದ್ರೂ ಹೋಗುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ವ್ಯಕ್ತಿಯೊಬ್ಬರು ನೀಡಿರುವ ಹೇಳಿಕೆ ನೋಡಿದ ನೆಟ್ಟಿಗರು ಥೂ…… ವ್ಯಾಕ್ ಎಂದಿದ್ದಾರೆ.

ಲಸಿಕೆ ವಿರೋಧಿ ಸಮುದಾಯದ ಪ್ರಮುಖ ವ್ಯಕ್ತಿಯೊಬ್ಬರು ತಮ್ಮ ಅನುಯಾಯಿಗಳಿಗೆ ಕೋವಿಡ್-19 ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಲಸಿಕೆ ಹಾಕುವ ಬದಲು ತಮ್ಮದೇ ಮೂತ್ರವನ್ನು ಕುಡಿಯಲು ಸಲಹೆ ನೀಡಿದ್ದಾರೆ. ಲಸಿಕೆ ವಿರೋಧಿ ಗುಂಪಿನ ಮುಖ್ಯಸ್ಥರಾಗಿರುವ ಕ್ರಿಸ್ಟೋಫರ್ ಎಂಬುವವರೇ ಈ ವಿಚಿತ್ರ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಕೊರೋನಾ ವೈರಸ್ ಗೆ ಮೂತ್ರ ವಿಷವಾಗಿ ಪರಿಣಮಿಸುತ್ತದೆ ಅನ್ನೋದು ಅವರ ಇಂಗಿತ. ಕೊರೋನಾ ವಿರುದ್ಧ ಮೂತ್ರವೇ ಚಿಕಿತ್ಸೆ ಎಂದು ಕ್ರಿಸ್ಟೋಫರ್ ಹೇಳಿದಾಗ ಅಲ್ಲಿದ್ದವರೆಲ್ಲಾ ಮೌನವಾಗಿದ್ದಾರೆ. ಕಳೆದ 23 ವರ್ಷಗಳಿಂದ ತಾನು ಮೂತ್ರ ಕುಡಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇದು ಇನ್ನೂ ಕೂಡ ಲಸಿಕೆ ತೆಗೆದುಕೊಳ್ಳುವರಿಗೆ ಸಹಾಯ ಮಾಡುವ ಪ್ರತಿವಿಷವಾಗಿದೆ ಎಂದು ತಿಳಿಸಿದ್ದಾರೆ.

ಅಂದಹಾಗೆ, ಪ್ರಪಂಚದಾದ್ಯಂತದ ಅನೇಕ ಜನರು ವಿವಿಧ ಕಾರಣಗಳಿಗಾಗಿ ತಮ್ಮದೇ ಆದ ಮೂತ್ರವನ್ನು ಕುಡಿಯುತ್ತಾರೆ. ಆದರೆ, ಮೂತ್ರವು ಯಾವುದೇ ರೀತಿಯಲ್ಲಿ ಕೋವಿಡ್-19 ಅನ್ನು ಗುಣಪಡಿಸುತ್ತದೆ ಎಂದು ಸಾಬೀತುಪಡಿಸಲು ಯಾವುದೇ ವೈದ್ಯಕೀಯ ಪುರಾವೆಗಳಾಗಲಿ ಅಥವಾ ಅಧ್ಯಯನಗಳಾಗಲಿ ಇಲ್ಲ.

— The Jewish Ginger Resister (@JewishResister) January 10, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...