alex Certify ಕೋವಿಡ್​ 19 ಮಾರ್ಗಸೂಚಿ ಉಲ್ಲಂಘನೆ: ಕುಸ್ತಿಪಟು ಬಬಿತಾ ವಿರುದ್ಧ ಕೇಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ 19 ಮಾರ್ಗಸೂಚಿ ಉಲ್ಲಂಘನೆ: ಕುಸ್ತಿಪಟು ಬಬಿತಾ ವಿರುದ್ಧ ಕೇಸ್

ಬಾಗ್​ಪತ್​​ನಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕುಸ್ತಿಪಟು ಬಬಿತಾ ಪೋಗಟ್​ ಹಾಗೂ ಬಾಗಪತ್​​ನ ಬಿಜೆಪಿ ಅಭ್ಯರ್ಥಿ ಕ್ರಿಶನ್​ಪಾಲ್​ ಮಲಿಕ್​ ಹಾಗೂ ಇತರೆ ಅರವತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಬಾಗಪತ್​​ನಲ್ಲಿ ಸಾರ್ವಜನಿಕ ರ್ಯಾಲಿ ನಡೆಸುತ್ತಿರುವ ವಿಡಿಯೋ ವೈರಲ್​ ಆದ ಬಳಿಕ ಬಬಿತಾ ಪೋಗಟ್​​, ಕ್ರಿಶನ್​ಪಾಲ್ ಮಲಿಕ್​ ಸೇರಿದಂತೆ ಅರವತ್ತು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್​ 269,270 ಹಾಗೂ 188 ಮತ್ತು ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಬಬಿತಾ ಪೋಗಟ್​ ಬಾಗಪಾತ್​ನ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಆಗಿರುವ ಕ್ರಿಶನ್​ಪಾಲ್​ ಮಲಿಕ್​ ಪರ ಪ್ರಚಾರ ಮಾಡಲು ಬಡೌತ್​ನ ಬಾಲಿ ಗ್ರಾಮಕ್ಕೆ ತೆರಳಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...