alex Certify ಕೋಟಿ ಕೋಟಿ ಬೆಲೆಬಾಳೋ ಮನೆಯನ್ನು ಹೆಚ್ಚು ಲಾಭವಿಲ್ಲದೇ ಮಾರಿದ್ದಾಳೆ ಈ ನಟಿ, ಕಾರಣ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟಿ ಕೋಟಿ ಬೆಲೆಬಾಳೋ ಮನೆಯನ್ನು ಹೆಚ್ಚು ಲಾಭವಿಲ್ಲದೇ ಮಾರಿದ್ದಾಳೆ ಈ ನಟಿ, ಕಾರಣ ಗೊತ್ತಾ….?

ಸಾಮಾನ್ಯವಾಗಿ ಸಿನೆಮಾ ಮಂದಿಯೆಲ್ಲ ಐಷಾರಾಮಿ ಮನೆಗಳಲ್ಲಿ ವಾಸಿಸ್ತಾರೆ. ಮುಂಬೈನಲ್ಲಂತೂ ಅಂತಹ ಫ್ಲಾಟ್‌ಗಳಿಗೇನೂ ಕೊರತೆಯಿಲ್ಲ. ಬಾಲಿವುಡ್‌ ನಟಿ ಸೋನಂ ಕಪೂರ್‌ ಕೂಡ ಅಂಥದ್ದೇ ಐಷಾರಾಮಿ ಫ್ಲಾಟ್‌ಗೆ ಒಡತಿಯಾಗಿದ್ದರು. ಆದರೆ ಕೋಟಿ ಕೋಟಿ ಬೆಲೆಬಾಳುವ ಈ ಫ್ಲಾಟ್‌ ಅನ್ನು ಸೋನಂ ಮಾರಿಬಿಟ್ಟಿದ್ದಾರೆ. ಇದರಲ್ಲಿ ಸೋನಂಗೆ ಹೆಚ್ಚು ಲಾಭವೂ ಆಗಿಲ್ಲ. ಆದರೂ ಫ್ಲಾಟ್‌ ಮಾರಿದ್ದೇಕೆ? ಅಂತಹ ಸಂದರ್ಭವೇನಿತ್ತು ಅನ್ನೋದು ನೆಟ್ಟಿಗರ ಪ್ರಶ್ನೆ.

ಸೋನಂ ಕಪೂರ್ ಈ ಫ್ಲಾಟ್ ಅನ್ನು 31.48 ಕೋಟಿ ರೂಪಾಯಿಗೆ ಖರೀದಿಸಿದ್ದರು. ಡಿಸೆಂಬರ್‌ನಲ್ಲಿ ಈ ಫ್ಲಾಟ್ ಅನ್ನು 32.50 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಹಾಗಾಗಿ ಇದರಲ್ಲಿ ಸೋನಂಗೆ ಹೆಚ್ಚು ಲಾಭವಾಗಿಲ್ಲ ಅನ್ನೋದು ಸ್ಪಷ್ಟ. ನಟಿಯ ಈ ಫ್ಲಾಟ್ ಮುಂಬೈನ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಪ್ರದೇಶದಲ್ಲಿದೆ. ಅತ್ಯಂತ ಪ್ರಶಾಂತವಾದ ಜಾಗ ಇದು.

8 ವರ್ಷಗಳ ಹಿಂದೆ ಸೋನಂ ಇಲ್ಲಿ ಫ್ಲಾಟ್‌ ಕೊಂಡುಕೊಂಡಿದ್ದರು. ಅನಿಲ್ ಕಪೂರ್ ಪುತ್ರಿ ಈ ಫ್ಲಾಟ್‌ ಅನ್ನು ಹೆಚ್ಚು ಬಳಸಿಲ್ಲವಂತೆ. ಇಷ್ಟು ಬೇಗನೆ ಅದನ್ನು ಮಾರಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇತ್ತೀಚೆಗಷ್ಟೆ ಸೋನಂ ಕಪೂರ್‌ ಅಮ್ಮನಾಗಿ ಭಡ್ತಿ ಪಡೆದಿದ್ದಾರೆ. ಗಂಡು ಮಗುವಿನ ತಾಯಿಯಾಗಿರೋ ಸೋನಂ ಸದ್ಯ ಮದರ್‌ಹುಡ್‌ ಅನ್ನು ಆನಂದಿಸ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...