alex Certify ಕೋಚ್ ಹುಟ್ಟುಹಬ್ಬದ ಆಚರಣೆಗೆ ಕೊಹ್ಲಿ ಗೈರು…….? ಕೊಹ್ಲಿ ಕಹಾ ಹೈ….? ಎಂದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಚ್ ಹುಟ್ಟುಹಬ್ಬದ ಆಚರಣೆಗೆ ಕೊಹ್ಲಿ ಗೈರು…….? ಕೊಹ್ಲಿ ಕಹಾ ಹೈ….? ಎಂದ ಅಭಿಮಾನಿಗಳು

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ 49ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಹಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜನ್ಮದಿನದ ಆಚರಣೆ ಬಗ್ಗೆ ಅಷ್ಟೊಂದು ಉತ್ಸುಕತೆ ತೋರದಿದ್ದರು, ರಾಹುಲ್ ತಮ್ನ ಇಂಡಿಯನ್ ಟೀಮ್ ನೊಂದಿಗೆ ಕೇಕ್ ಕತ್ತರಿಸಿ ಸಣ್ಣ ಸೆಲೆಬ್ರೇಷನ್ನಲ್ಲಿ ಖುಷಿಯಾಗಿದ್ದರು. ಈ ಚಿತ್ರಗಳನ್ನ ಮೊಹಮದ್ ಶಮಿ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಈ ಸೆಲೆಬ್ರೇಷನ್ ಚಿತ್ರಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ವಿಚಿತ್ರ ವಿಷಯವೊಂದನ್ನ ಗಮನಿಸಿದ್ದಾರೆ. ಶಮಿ ಹಂಚಿಕೊಂಡ ನಾಲ್ಕು ಚಿತ್ರಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಒಂದೇ ಒಂದು ಚಿತ್ರದಲ್ಲು ಇರಲಿಲ್ಲ. ಶಮಿ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ, ರಿಷಭ್ ಪಂತ್, ವೃದ್ಧಿಮಾನ್ ಸಹಾ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರಂತಹ ಎಲ್ಲಾ ಆಟಗಾರರು ಆಚರಣೆ ನಂತರ, ರಾಹುಲ್ ಅವರೊದಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಆದರೆ ಈ ಚಿತ್ರಗಳಲ್ಲಿ ಕೊಹ್ಲಿ ಸುಳಿವೆ ಇಲ್ಲ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಶಮಿ ಪೋಸ್ಟ್ ನ ಕಾಮೆಂಟ್ ಬಾಕ್ಸ್ ಕೊಹ್ಲಿ ಎಲ್ಲಿ ಎಂಬ ಪ್ರತಿಕ್ರಿಯೆಗಳಿಂದ ತುಂಬಿ ಹೋಗಿದೆ. ಸೆಲೆಬ್ರೇಷನ್ ಗೆ ನಾಯಕ ಕೊಹ್ಲಿಯೆ ಗೈರಾಗಿದ್ದಾರೆ‌, ವಿರಾಟ್ ಇಲ್ಲದೆ ಪಾರ್ಟಿ ಮಾಡುತ್ತಿದ್ದೀರಾ ಅಂದ್ರೆ ಬೇರೆ ಏನೋ ವಿಚಾರವಿದೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

— Mohammad Shami (@MdShami11) January 11, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...