
ಆದರೆ ಈ ಸೆಲೆಬ್ರೇಷನ್ ಚಿತ್ರಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ವಿಚಿತ್ರ ವಿಷಯವೊಂದನ್ನ ಗಮನಿಸಿದ್ದಾರೆ. ಶಮಿ ಹಂಚಿಕೊಂಡ ನಾಲ್ಕು ಚಿತ್ರಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಒಂದೇ ಒಂದು ಚಿತ್ರದಲ್ಲು ಇರಲಿಲ್ಲ. ಶಮಿ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ, ರಿಷಭ್ ಪಂತ್, ವೃದ್ಧಿಮಾನ್ ಸಹಾ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರಂತಹ ಎಲ್ಲಾ ಆಟಗಾರರು ಆಚರಣೆ ನಂತರ, ರಾಹುಲ್ ಅವರೊದಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಆದರೆ ಈ ಚಿತ್ರಗಳಲ್ಲಿ ಕೊಹ್ಲಿ ಸುಳಿವೆ ಇಲ್ಲ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಶಮಿ ಪೋಸ್ಟ್ ನ ಕಾಮೆಂಟ್ ಬಾಕ್ಸ್ ಕೊಹ್ಲಿ ಎಲ್ಲಿ ಎಂಬ ಪ್ರತಿಕ್ರಿಯೆಗಳಿಂದ ತುಂಬಿ ಹೋಗಿದೆ. ಸೆಲೆಬ್ರೇಷನ್ ಗೆ ನಾಯಕ ಕೊಹ್ಲಿಯೆ ಗೈರಾಗಿದ್ದಾರೆ, ವಿರಾಟ್ ಇಲ್ಲದೆ ಪಾರ್ಟಿ ಮಾಡುತ್ತಿದ್ದೀರಾ ಅಂದ್ರೆ ಬೇರೆ ಏನೋ ವಿಚಾರವಿದೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.