alex Certify ಕೊಹ್ಲಿ 71ನೇ ಶತಕ ಈ ದೇಶದಲ್ಲೇ ಆಗಬೇಕೆಂದು ಬೇಡಿಕೆಯಿಟ್ಟ ಅಭಿಮಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿ 71ನೇ ಶತಕ ಈ ದೇಶದಲ್ಲೇ ಆಗಬೇಕೆಂದು ಬೇಡಿಕೆಯಿಟ್ಟ ಅಭಿಮಾನಿ..!

ಟೀಂ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿಗೆ ದೇಶಾದ್ಯಂತ ಮಾತ್ರವಲ್ಲದೇ ವಿಶ್ವದ ತುಂಬೆಲ್ಲ ಅಭಿಮಾನಿಗಳಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ.

2021ರ ಟಿ 20 ವಿಶ್ವಕಪ್​ ಬಳಿಕ ಪಾಕಿಸ್ತಾನದ ವಿರುದ್ಧ ಕೊಹ್ಲಿ ಮುಂದಿನ ದಿನಗಳಲ್ಲಿ ಪಂದ್ಯವನ್ನು ಆಡಬೇಕಿದೆ. ಆದರೆ ಅಷ್ಟರಲ್ಲಾಗಲೇ ಪಾಕ್​ನ ಕೊಹ್ಲಿ ಅಭಿಮಾನಿಗಳು ಕೊಹ್ಲಿ ಪಾಕಿಸ್ತಾನದಲ್ಲಿಯೇ ಪಂದ್ಯವನ್ನು ಆಡಬೇಕೆಂದು ಬೇಡಿಕೆ ಇಡುತ್ತಿದ್ದಾರಂತೆ.

ಇತ್ತೀಚಿಗಷ್ಟೇ ನಡೆದ ಪಾಕಿಸ್ತಾನ ಸೂಪರ್​ ಲೀಗ್​ ಪಂದ್ಯದ ವೇಳೆ ಲಾಹೋರ್​ನಲ್ಲಿ ಅಭಿಮಾನಿಯೊಬ್ಬರು ಪಾಕ್​ನಲ್ಲಿ ಕೊಹ್ಲಿ ಆಡುವುದನ್ನು ನೋಡಲು ಬಯಸುತ್ತೇನೆ ಎಂಬ ಬ್ಯಾನರ್​ ಹಿಡಿದಿದ್ದರು. ಇದೀಗ ಭಾನುವಾರದಂದು ಪಾಕ್​ ಹಾಗೂ ಆಸ್ಟ್ರೇಲಿಯಾದ ನಡುವಿನ ಟೆಸ್ಟ್​ ಪಂದ್ಯದ ಮೂರನೇ ದಿನದಂದು ಕ್ಯಾಮರಾಮ್ಯಾನ್​ ಇದೇ ರೀತಿಯ ಬ್ಯಾನರ್​ ಹಿಡಿದ ಇಬ್ಬರು ಪ್ರೇಕ್ಷಕರನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ.

ಒಂದು ಬ್ಯಾನರ್​ನಲ್ಲಿ ವಿರಾಟ್​ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನದ 71ನೇ ಶತಕವನ್ನು ಪಾಕ್​ ನೆಲದಲ್ಲಿ ಸಿಡಿಸುವುದನ್ನು ನೋಡಲು ಇಚ್ಛಿಸುತ್ತೇವೆಂದು ಬರೆಯಲಾಗಿದೆ. ಇನ್ನೊಂದು ಬ್ಯಾನರ್​ನಲ್ಲಿ ಅಕ್ಟೋಬರ್​ 23ರಂದು ನಡೆಯಲಿದೆ ಭಾರತ ವರ್ಸಸ್​ ಪಾಕಿಸ್ತಾನದ ಮಹತ್ವದ ಮ್ಯಾಚ್​, ರೋಹಿತ್​ ವರ್ಸಸ್​ ಶಹೀನ್​ ಎಂದು ಬರೆಯಲಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...