ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ದೇಶಾದ್ಯಂತ ಮಾತ್ರವಲ್ಲದೇ ವಿಶ್ವದ ತುಂಬೆಲ್ಲ ಅಭಿಮಾನಿಗಳಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ.
2021ರ ಟಿ 20 ವಿಶ್ವಕಪ್ ಬಳಿಕ ಪಾಕಿಸ್ತಾನದ ವಿರುದ್ಧ ಕೊಹ್ಲಿ ಮುಂದಿನ ದಿನಗಳಲ್ಲಿ ಪಂದ್ಯವನ್ನು ಆಡಬೇಕಿದೆ. ಆದರೆ ಅಷ್ಟರಲ್ಲಾಗಲೇ ಪಾಕ್ನ ಕೊಹ್ಲಿ ಅಭಿಮಾನಿಗಳು ಕೊಹ್ಲಿ ಪಾಕಿಸ್ತಾನದಲ್ಲಿಯೇ ಪಂದ್ಯವನ್ನು ಆಡಬೇಕೆಂದು ಬೇಡಿಕೆ ಇಡುತ್ತಿದ್ದಾರಂತೆ.
ಇತ್ತೀಚಿಗಷ್ಟೇ ನಡೆದ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದ ವೇಳೆ ಲಾಹೋರ್ನಲ್ಲಿ ಅಭಿಮಾನಿಯೊಬ್ಬರು ಪಾಕ್ನಲ್ಲಿ ಕೊಹ್ಲಿ ಆಡುವುದನ್ನು ನೋಡಲು ಬಯಸುತ್ತೇನೆ ಎಂಬ ಬ್ಯಾನರ್ ಹಿಡಿದಿದ್ದರು. ಇದೀಗ ಭಾನುವಾರದಂದು ಪಾಕ್ ಹಾಗೂ ಆಸ್ಟ್ರೇಲಿಯಾದ ನಡುವಿನ ಟೆಸ್ಟ್ ಪಂದ್ಯದ ಮೂರನೇ ದಿನದಂದು ಕ್ಯಾಮರಾಮ್ಯಾನ್ ಇದೇ ರೀತಿಯ ಬ್ಯಾನರ್ ಹಿಡಿದ ಇಬ್ಬರು ಪ್ರೇಕ್ಷಕರನ್ನು ತಮ್ಮ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ.
ಒಂದು ಬ್ಯಾನರ್ನಲ್ಲಿ ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ 71ನೇ ಶತಕವನ್ನು ಪಾಕ್ ನೆಲದಲ್ಲಿ ಸಿಡಿಸುವುದನ್ನು ನೋಡಲು ಇಚ್ಛಿಸುತ್ತೇವೆಂದು ಬರೆಯಲಾಗಿದೆ. ಇನ್ನೊಂದು ಬ್ಯಾನರ್ನಲ್ಲಿ ಅಕ್ಟೋಬರ್ 23ರಂದು ನಡೆಯಲಿದೆ ಭಾರತ ವರ್ಸಸ್ ಪಾಕಿಸ್ತಾನದ ಮಹತ್ವದ ಮ್ಯಾಚ್, ರೋಹಿತ್ ವರ್ಸಸ್ ಶಹೀನ್ ಎಂದು ಬರೆಯಲಾಗಿದೆ.