alex Certify ಕೊಳಲಿನಲ್ಲಿ ‘ಸಂದೇಸೆ ಆತೇ ಹೈ’ ನುಡಿಸಿದ ಪೊಲೀಸ್ ಪೇದೆ: ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಳಲಿನಲ್ಲಿ ‘ಸಂದೇಸೆ ಆತೇ ಹೈ’ ನುಡಿಸಿದ ಪೊಲೀಸ್ ಪೇದೆ: ನೆಟ್ಟಿಗರು ಫಿದಾ

Viral Video: Mumbai Cop Plays 'Sandese Aate Hain' on Flute, Internet is All Hearts | Watchಪೊಲೀಸರು ಖಾಕಿ ಹಾಕಿಕೊಂಡು ತಮ್ಮ ಕೆಲಸ ನಿರ್ವಹಿಸೋದು ಮಾತ್ರವಲ್ಲ ಇವರಲ್ಲು ಪ್ರತಿಭೆಗಳಿರುವವರು ಇದ್ದಾರೆ. ಹಾಡು, ಡಾನ್ಸ್ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡವರಿದ್ದಾರೆ. ಇದೀಗ 1997ರ ಬಾರ್ಡರ್‌ ಸಿನಿಮಾದ ಸಂದೇಸೆ ಆತೇ ಹೈ ಅನ್ನು ಮುಂಬೈ ಪೊಲೀಸ್ ಕಾನ್ಸ್‌ಟೇಬಲ್ ನುಡಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ರಸ್ತೆಯೊಂದರಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ, ಪೊಲೀಸ್ ಪೇದೆ ಕೊಳಲಿನ ಮೂಲಕ ಸುಂದರವಾದ ಹಾಡನ್ನು ಸಲೀಸಾಗಿ ನುಡಿಸಿದ್ದಾರೆ. ಈ ವೇಳೆ ಒಬ್ಬ ಟ್ರಾಫಿಕ್ ಪೊಲೀಸ್ ಅವರ ಪಕ್ಕದಲ್ಲಿ ನಿಂತು ಕೊಳಲಿನ ನಾದಕ್ಕೆ ತಲೆದೂಗಿದ್ದಾರೆ.

ಈ ವಿಡಿಯೋವನ್ನು ವಡಾಲಾ ಮಾಟುಂಗಾ ಸಿಯಾನ್ ಫೋರಮ್ ಎಂಬ ಟ್ವಿಟ್ಟರ್‌ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಮುಂಬೈನ ವಡಾಲಾದ ರಫಿ ಅಹ್ಮದ್ ಕಿದ್ವಾಯಿ ಮಾರ್ಗದಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಸದ್ಯ, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪೇದೆ ನುಡಿಸಿರುವ ಹಾಡನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಪೊಲೀಸರು ಬಹಳ ಒತ್ತಡದಿಂದ ಜೀವನ ನಡೆಸುತ್ತಾರೆ. ಅವರು ನಿಜವಾಗಿಯೂ ಒಮ್ಮೆ ಈ ರೀತಿಯ ವಿರಾಮಕ್ಕೆ ಅರ್ಹರು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

— Wadala Matunga Sion Forum (@WadalaForum) May 8, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...