
ರಸ್ತೆಯೊಂದರಲ್ಲಿ ಚಿತ್ರೀಕರಿಸಲಾದ ವಿಡಿಯೋದಲ್ಲಿ, ಪೊಲೀಸ್ ಪೇದೆ ಕೊಳಲಿನ ಮೂಲಕ ಸುಂದರವಾದ ಹಾಡನ್ನು ಸಲೀಸಾಗಿ ನುಡಿಸಿದ್ದಾರೆ. ಈ ವೇಳೆ ಒಬ್ಬ ಟ್ರಾಫಿಕ್ ಪೊಲೀಸ್ ಅವರ ಪಕ್ಕದಲ್ಲಿ ನಿಂತು ಕೊಳಲಿನ ನಾದಕ್ಕೆ ತಲೆದೂಗಿದ್ದಾರೆ.
ಈ ವಿಡಿಯೋವನ್ನು ವಡಾಲಾ ಮಾಟುಂಗಾ ಸಿಯಾನ್ ಫೋರಮ್ ಎಂಬ ಟ್ವಿಟ್ಟರ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಮುಂಬೈನ ವಡಾಲಾದ ರಫಿ ಅಹ್ಮದ್ ಕಿದ್ವಾಯಿ ಮಾರ್ಗದಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಸದ್ಯ, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪೇದೆ ನುಡಿಸಿರುವ ಹಾಡನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಪೊಲೀಸರು ಬಹಳ ಒತ್ತಡದಿಂದ ಜೀವನ ನಡೆಸುತ್ತಾರೆ. ಅವರು ನಿಜವಾಗಿಯೂ ಒಮ್ಮೆ ಈ ರೀತಿಯ ವಿರಾಮಕ್ಕೆ ಅರ್ಹರು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.