alex Certify ಕೊರೋನಾ ಹೊತ್ತಲ್ಲೇ ಮತ್ತೊಂದು ನಿಗೂಢ ರೋಗದ ಶಾಕ್: ಮೆದುಳಿನ ಕಾಯಿಲೆಯ 48 ಪ್ರಕರಣ ಪತ್ತೆ – ಕೆನಡಾದಲ್ಲಿ ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಹೊತ್ತಲ್ಲೇ ಮತ್ತೊಂದು ನಿಗೂಢ ರೋಗದ ಶಾಕ್: ಮೆದುಳಿನ ಕಾಯಿಲೆಯ 48 ಪ್ರಕರಣ ಪತ್ತೆ – ಕೆನಡಾದಲ್ಲಿ ಆತಂಕ

ಕೊರೋನಾ ಸೋಂಕಿನ ಹೊತ್ತಲ್ಲೇ ಮತ್ತೊಂದು ಸಾಂಕ್ರಾಮಿಕ ರೋಗದ ಆತಂಕ ಎದುರಾಗಿದೆ. ಕೆನಡಾದಲ್ಲಿ ನಿಗೂಢ ಮೆದುಳಿನ ಕಾಯಿಲೆಯಿಂದ ಬಳಲುತ್ತಿರುವ 48 ಪ್ರಕರಣಗಳು ಕಂಡುಬಂದಿವೆ. ಇದರಿಂದ ಆತಂಕ ಹೆಚ್ಚಾಗಿದೆ.

ಇಲ್ಲಿವರೆಗೆ ಇಂತಹ ಲಕ್ಷಣಗಳಿರುವ 48 ಸೋಂಕಿತ ರೋಗಿಗಳು ಕಂಡುಬಂದಿದ್ದು, ಇವರಲ್ಲಿ ನಿದ್ರಾಹೀನತೆ, ಅಂಗಗಳ ಅಸಾಮಾನ್ಯ ಕ್ರಿಯೆ ಮತ್ತು ಭ್ರಮೆ ಲಕ್ಷಣ ಕಂಡುಬರುತ್ತಿದೆ ಎಂದು ಹೇಳಲಾಗಿದೆ.

ಕೆನಡಾದ ನ್ಯೂ ಬ್ರನ್ಸ್‌ ವಿಕ್‌ನಲ್ಲಿ 48 ರೋಗಿಗಳು

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಈ ನಿಗೂಢ ಕಾಯಿಲೆಯವರು ಕೆನಡಾ ಪ್ರಾಂತ್ಯದ ಬ್ರನ್ಸ್ ವಿಕ್ ನಲ್ಲಿ ಅಟ್ಲಾಂಟಿಕ್ ಕರಾವಳಿಯ ಪ್ರದೇಶದಲ್ಲಿ ಕಂಡುಬಂದಿದ್ದಾರೆ. ರೋಗಿಗಳು ತಮ್ಮ ಕನಸಿನಲ್ಲಿ ಮೃತದೇಹಗಳನ್ನು, ಸತ್ತ ಜನರನ್ನು ನೋಡುತ್ತಿದ್ದಾರೆ. ಇದರಿಂದಾಗಿ ಕೆನಡಾದ ಜನರಲ್ಲಿ ಭಯ ಉಂಟಾಗಿದೆ. ಅನೇಕ ನರವಿಜ್ಞಾನಿಗಳು ರೋಗದ ಕಾರಣವನ್ನು ಕಂಡು ಹಿಡಿಯಲು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ.

ವಿಜ್ಞಾನಿಗಳ ಪ್ರಕಾರ ರೋಗ ಏಕೆ ಹರಡುತ್ತಿದೆ?

ಸೆಲ್ ಫೋನ್ ವಿಕಿರಣಗಳ ಮೂಲಕ ಈ ರೋಗ ಹರಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದೇ ಸಮಯದಲ್ಲಿ ಕೊರೋನಾ ರೋಗಕ್ಕೆ ನೀಡಲಾದ ಲಸಿಕೆಯಿಂದ ಇಂತಹ ರೋಗ ಬಂದಿದೆ ಎಂದು ದೂಷಿಸುವ ಅನೇಕ ವಿಜ್ಞಾನಿಗಳು ಇದ್ದಾರೆ. ಆದರೂ, ರೋಗಕ್ಕೆ ಕಾರಣವಾದ ಯಾವುದೇ ವೈಜ್ಞಾನಿಕ ದೃಢೀಕರಣ ವಿಜ್ಞಾನಿಗಳಿಂದ ಬಂದಿಲ್ಲ.

ಇದುವರೆಗೆ 6 ಜನ ಸಾವು

ಸುಮಾರು 6 ವರ್ಷಗಳ ಹಿಂದೆ ಕೆನಡಾದಲ್ಲಿ ರೋಗ ಹರಡಲು ಪ್ರಾರಂಭಿಸಿತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಡಜನ್ ಗಟ್ಟಲೆ ಜನರಿಗೆ ಇಂತಹ ಸೋಂಕು ತಗಲಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. 15 ತಿಂಗಳ ಹಿಂದೆ ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾಯಿತು. ಈ ಕಾರಣದಿಂದಾಗಿ ಜನ ಮತ್ತು ಆರೋಗ್ಯ ಅಧಿಕಾರಿಗಳ ಗಮನ ಬೇರೆಡೆ ಹೋಯಿತು.

ಯಾವುದೇ ಪ್ರಶ್ನೆಗೆ ವಿಜ್ಞಾನಿಗಳ ಬಳಿ ಉತ್ತರವಿಲ್ಲ

ಈ ನಿಗೂಢ ರೋಗವನ್ನು ಅಧ್ಯಯನ ಮಾಡಲು ಇಷ್ಟು ಸಮಯದ ನಂತರವೂ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. ರೋಗದ ಹೆಸರು ಕೂಡ ಗೊತ್ತಾಗಿಲ್ಲ. ಪರಿಸರದ ಮೂಲಕ ಈ ರೋಗ ಹರಡುತ್ತಿದೆಯೇ ಎಂಬ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಇದು ಅನುವಂಶಿಕತೆಯೇ? ಅಥವಾ ಜಿಂಕೆ ಮಾಂಸವನ್ನು ತಿನ್ನುವುದರಿಂದ ಬರುತ್ತದೆಯೇ? ಅದೂ ಅಲ್ಲದಿದ್ದರೆ ಈ ರೋಗ ಹೇಗೆ ಬರುತ್ತದೆ ಎಂಬುದರ ಬಗ್ಗೆ ಜನ ಪ್ರಶ್ನಿಸಿದ್ದು, ವಿಜ್ಞಾನಿಗಳಿಗೆ ರೋಗದ ಬಗ್ಗೆ ಏನನ್ನೂ ವಿವರಿಸಲು ಸಾಧ್ಯವಾಗುತ್ತಿಲ್ಲ.

ರೋಗದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ

ಮಾರ್ಚ್‌ ನಲ್ಲಿ ನ್ಯೂ ಬ್ರನ್ಸ್‌ ವಿಕ್‌ನ ಮುಖ್ಯ ವೈದ್ಯಾಧಿಕಾರಿ(ಸಿಎಮ್‌ಒ) ಈ ನಿಗೂಢ ಕಾಯಿಲೆಯ ಬಗ್ಗೆ ಸಾರ್ವಜನಿಕ ಮಾಹಿತಿಯನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಾಗ ಸಾರ್ವಜನಿಕರ ಗಮನಕ್ಕೆ ಬಂದಿದೆ. ಇದಕ್ಕೆ ನಿಧಾನವಾದ ಪ್ರತಿಕ್ರಿಯೆ ಬಂದಿದೆ. ಸದ್ಯ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಇತರ ವೈದ್ಯಕೀಯ ಪರಿಸ್ಥಿತಿಗಳ ಸವಾಲನ್ನು ಎದುರಿಸಲಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ವಿಜ್ಞಾನದಲ್ಲಿ ಅಸಾಧಾರಣ ಪ್ರಗತಿಯ ಹೊರತಾಗಿಯೂ, ಮಾನಸಿಕ ಕಾಯಿಲೆಗಳು ಅಥವಾ ನರ ಸಂಬಂಧಿತ ಕಾಯಿಲೆಗಳ ಜ್ಞಾನದಲ್ಲಿ ನಾವು ಇನ್ನೂ ಹಿಂದುಳಿದಿದ್ದೇವೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...