ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಾವನ್ನಪ್ಪುತ್ತಿದ್ದಾರೆ. ಇಂತಹ ಆತಂಕಕಾರಿ ಬೆಳವಣಿಗೆಗೆ ಹ್ಯಾಪಿ ಹೈಪೋಕ್ಸಿಯಾ ಕಾರಣ ಎಂದು ಹೇಳಲಾಗುತ್ತಿದೆ. ಇದು ನಿಜವೇ…?. ಹಾಗಾದರೆ ಹ್ಯಾಪಿ ಹೈಪೋಕ್ಸಿಯಾ ಎಂದರೇನು ? ಇದರ ಲಕ್ಷಣಗಳೇನು ? ಈ ಸಮಸ್ಯೆ ಕಂಡುಬಂದರೆ ಸುಲಭ ಪರಿಹಾರವೇನು ಎಂಬ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ತಿಳಿಸಿದ್ದಾರೆ.
BIG NEWS: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂವಿಧಾನಕ್ಕೆ ತಿದ್ದುಪಡಿ; ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ
ರಕ್ತದಲ್ಲಿನ ಆಕ್ಸಿಜನ್ ಪ್ರಮಾಣದಲ್ಲಿನ ವ್ಯತ್ಯಾಸದಿಂದ ಹೈಪೋಕ್ಸಿಯಾ ಕಂಡುಬರುತ್ತದೆ. ಈ ಹೈಪೋಕ್ಸಿಯಾದಂತಹ ಲಕ್ಷಣ ಇದ್ದರೂ ಕೂಡ ವ್ಯಕ್ತಿಯಲ್ಲಿ ಯಾವುದೇ ತೊಂದರೆ ಸಮಸ್ಯೆಯಾಗದೇ ಇರುವುದೇ ಹ್ಯಾಪಿ ಹೈಪೋಕ್ಸಿಯಾ. ಆದರೆ ಹೈಪೋಕ್ಸಿಯಾ ಲಕ್ಷಣಗಳು ಹಲವರಲ್ಲಿ ಅಪಾಯಕಾರಿಯಾಗಿದ್ದು, ಇಂತಹ ಸಮಸ್ಯೆಯಿಂದ ಪಾರಾಗಲು ಏನು ಮಾಡಬೇಕು ಯಾವೆಲ್ಲ ಮುಂಜಾಗೃತೆ ವಹಿಸಬೇಕು ಎಂಬ ಬಗ್ಗೆ ಡಾ. ರಾಜು ಸಲಹೆಗಳನ್ನು ನೀಡಿದ್ದಾರೆ. ಡಾ. ರಾಜು ಅವರ ಈ ಮಹತ್ವದ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ…