ಬೆಂಗಳೂರು: ದೇಶಾದ್ಯಂತ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದ್ದು, ’ಒಮಿಕ್ರಾನ್’ ಎಂಬ ಹೊಸ ರೂಪಾಂತರಿ ವೈರಸ್ ಹರಡುತ್ತಿರುವ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ರಾಜ್ಯದಲ್ಲಿಯೂ ಎಲ್ಲೆಡೆ ಸರ್ಕಾರ ಹೈ ಅಲರ್ಟ್ ಘೋಷಿಸಿದೆ. ಹಾಗಾದರೆ ಕೊರೊನಾ ಹೊಸ ತಳಿ ’ಒಮಿಕ್ರಾನ್’ ಎಷ್ಟು ಅಪಾಯಕಾರಿ? ಯಾವ ರೀತಿ ಪರಿಣಾಮ ಬೀರುತ್ತೆ ಎಂಬ ಬಗ್ಗೆ ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ಒಮಿಕ್ರಾನ್ ವೈರಸ್ ಇದೀಗ ಜಗತ್ತಿನಾದ್ಯಂತ ಆತಂಕವನ್ನುಂಟು ಮಾಡಿದೆ. 30ಕ್ಕಿಂತ ಹೆಚ್ಚು ತಳಿಗಳು ಈ ವೈರಸ್ ನಲ್ಲಿ ಇದ್ದು, ಡೆಲ್ಟಾಗಿಂತ ಹತ್ತುಪಟ್ಟು ಹೆಚ್ಚು ಅಪಾಯಕಾರಿ ಹಾಗೂ ಅತಿ ವೇಗವಾಗಿ ಹರಡುತ್ತದೆ. ವ್ಯಾಕ್ಸಿನ್ ಕೂಡ ಹೊಸ ವೈರಸ್ ನಿಂದ ನಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಒಮಿಕ್ರಾನ್ ಕುರಿತ ದಿನೊಕ್ಕೊಂದು ಸುದ್ದಿ ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ… ಹಲವು ಗೊಂದಲವನ್ನು ಸೃಷ್ಟಿಸಿದೆ… ಒಮಿಕ್ರಾನ್ ಕುರಿತ ಗೊಂದಲಗಳಿಗೆ ನೂರಾರು ಪ್ರಶ್ನೆಗಳಿಗೆ ಉತ್ತರವಾಗಿ ಡಾ.ರಾಜು ಸಮರ್ಪಕ ಮಾಹಿತಿಯನ್ನು ನೀಡಿದ್ದಾರೆ.
ಟಿಕ್ ಟಾಕ್ ಹುಚ್ಚಿನಿಂದ ವೈದ್ಯನ ಕೆಲಸಕ್ಕೆ ಕುತ್ತು….!
’ಒಮಿಕ್ರಾನ್’ ಅತಿ ಅಪಾಯಕಾರಿ ವೈರಸ್, ವೇಗವಾಗಿ ಹರಡುತ್ತದೆ ಎಂಬುದು ಸುಳ್ಳು. ಒಮಿಕ್ರಾನ್ ಕುರಿತ ಅನಗತ್ಯ ಆತಂಕ ಬೇಡ ಎಂದು ಧೈರ್ಯ ತುಂಬಿರುವ ಡಾ. ರಾಜು ರೂಪಾಂತರಿ ಹೊಸ ತಳಿ ಕುರಿತು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಡಾ.ರಾಜು ಅವರ ಹೊಸ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ…