alex Certify ಕೊನೆಗೂ ಬಯಲಾಯ್ತು ನಿಜ ಜೀವನದ ʼಮುನ್ನಾಭಾಯ್​ ಎಂಬಿಬಿಎಸ್ʼ​ ಅಸಲಿಯತ್ತು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊನೆಗೂ ಬಯಲಾಯ್ತು ನಿಜ ಜೀವನದ ʼಮುನ್ನಾಭಾಯ್​ ಎಂಬಿಬಿಎಸ್ʼ​ ಅಸಲಿಯತ್ತು….!

ಅಸ್ಸಾಂನಲ್ಲಿ ಕೆಲ ದಿನಗಳ ಹಿಂದಷ್ಟೇ ನಿಜ ಜೀವನದಲ್ಲಿಯೂ ಮುನ್ನಾಭಾಯ್​ ಎಂಬಿಬಿಎಸ್​ ಘಟನೆಯೊಂದು ನಡೆದಿತ್ತು. ಆದರೆ ಇದೀಗ ಈ ನಿಜಜೀವನದ ಮುನ್ನಾಭಾಯ್​ ಬಹುತೇಕ ಎಲ್ಲರನ್ನೂ ಮೂರ್ಖರನ್ನಾಗಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದೊಂದು ವಾರದಿಂದ 24 ವರ್ಷದ ಪಠಾಛಾರ್​ ಕುಚ್ಚಿಯ ರಾಹುಲ್​ ಕುಮಾರ್​​ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದ್ದರು. ಒಂಟಿ ಮಹಿಳೆಯ ಪುತ್ರನೆಂದು ಹಾಗೂ ಟೀ ಮಾರಾಟ ಮಾಡುತ್ತಾ ಹೊಟ್ಟೆಪಾಡು ಸಾಗಿಸುತ್ತಿರುವ ಈ 24 ವರ್ಷದ ಯುವಕ ಮೊದಲ ಪ್ರಯತ್ನದಲ್ಲಿಯೇ ನೀಟ್​ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರತಿಷ್ಠಿತ ಏಮ್ಸ್​ನಲ್ಲಿ ಸೀಟು ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಇದೊಂದು ಕಟ್ಟುಕತೆ ಎಂದು ತಿಳಿದುಬಂದಿದೆ.

ನೀಟ್​​ ಪರೀಕ್ಷೆಗೆ ಹಾಜರಾಗಿದ್ದ ಆಸ್ಸಾಂನ ವಿದ್ಯಾರ್ಥಿಗಳ ಗುಂಪೊಂದು ರಾಹುಲ್​ ಅವರ ಹೇಳಿಕೆಗಳು ನಕಲಿ ಎಂದು ಮಾಧ್ಯಮಗಳ ಎದುರು ಸಾಬೀತುಪಡಿಸಿವೆ. ಫ್ಯಾಕ್ಟ್​ ಚೆಕ್ ನಲ್ಲಿ​ ಈತ ಬೇರೆಯವರ ದಾಖಲೆಗಳನ್ನು ತೋರಿಸಿ ತನಗೆ ಏಮ್ಸ್​ನಲ್ಲಿ ಸೀಟು ಸಿಕ್ಕಿದೆ ಎಂದು ತಪ್ಪು ಕತೆ ಹೇಳಿದ್ದ ಎಂದು ತಿಳಿದುಬಂದಿದೆ.

ರಾಹುಲ್​ ತೋರಿಸಿರುವ ಪ್ರವೇಶ ಪತ್ರದಲ್ಲಿ ನೀಟ್​ ಪರೀಕ್ಷೆಗೆ ಅವರ ರೋಲ್​ ಸಂಖ್ಯೆ2303001114 ಎಂದು ನಮೂದಾಗಿತ್ತು. ಆದರೆ ಕ್ರಾಸ್​ ವೆರಿಫಿಕೇಶನ್​ ಮಾಡಿದ ವೇಳೆಯಲ್ಲಿ ಇದು ಹರಿಯಾಣದ ಕಿರಣ್​ಜೀತ್​ ಕೌರ್​ ರೋಲ್​ ಸಂಖ್ಯೆ ಎಂದು ತಿಳಿದುಬಂದಿದೆ. ಕಿರಣ್​ಜೀತ್​ ಕೌರ್​​ ನೀಟ್​ ಪರೀಕ್ಷೆಯಲ್ಲಿ AIR 11656 ರ್ಯಾಂಕ್​ ಪಡೆದಿದ್ದರು.

ಈ ರಾಹುಲ್​ ಏಮ್ಸ್​ನಲ್ಲಿ ಸೀಟು ಪಡೆದ ಸುದ್ದಿ ಎಷ್ಟರ ಮಟ್ಟಿಗೆ ವೈರಲ್​ ಆಗಿತ್ತು ಅಂದರೆ ಆಸ್ಸಾಂ ಮುಖ್ಯಮಂತ್ರಿ ಹಿಮಂತಬಿಸ್ವಾ ಶರ್ಮಾ ರಾಹುಲ್​​ನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...