ಸಾಂಬಾರ್, ರಸಂ ಸೇರಿದಂತೆ ವಿಶೇಷ ಸ್ಯ್ನಾಕ್ಸ್ ಗೆ ಕೊತ್ತಂಬರಿ ಸೊಪ್ಪು ಇರ್ಲೇಬೇಕು. ಅಲಂಕಾರಕ್ಕೆ, ರುಚಿಗೆ ಎರಡಕ್ಕೂ ಇದನ್ನು ಬಳಸಲಾಗುತ್ತದೆ. ಇದ್ರ ಪರಿಮಳ ಎಲ್ಲರನ್ನೂ ಸೆಳೆಯುತ್ತದೆ.
ಎಲ್ಲ ಅಡುಗೆಗೂ ಮುಖ್ಯವಾಗಿ ಬಳಸುವ ಕೊತ್ತಂಬರಿ ಸೊಪ್ಪನ್ನು ಕೆಡದಂತೆ ಕಾಪಾಡುವುದೇ ಮಹಿಳೆಯರಿಗೆ ದೊಡ್ಡ ತಲೆನೋವು. ಕೊತ್ತಂಬರಿ ಸೊಪ್ಪು ಬಹಳ ದಿನ ಇರಬೇಕೆಂದ್ರೆ ಒಂದು ಗ್ಲಾಸ್ ಗೆ ನೀರು ಹಾಕಿ ಕೊತ್ತುಂಬರಿ ಸೊಪ್ಪಿನ ಬುಡದ ಭಾಗವನ್ನು ಅದರಲ್ಲಿ ನೆನೆಸಿಡಿ. ಗ್ಲಾಸ್ ನಲ್ಲಿರುವ ನೀರನ್ನು ಪ್ರತಿನಿತ್ಯವೂ ಬದಲಿಸಬೇಕು ಇಲ್ಲವಾದರೆ ನೀರಿನಿಂದ ವಾಸನೆ ಬರಲು ಆರಂಭವಾಗುತ್ತದೆ.
ಮೊದಲು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಆರುವಂತೆ ಒಣಗಿಸಿ. ನಂತರ ಕೊತ್ತಂಬರಿ ಸೊಪ್ಪನ್ನು ಟಿಶ್ಶೂವಿನಲ್ಲಿ ಸುತ್ತಿ ಗಾಳಿಯಾಡದ ಡಬ್ಬದಲ್ಲಿಟ್ಟು ಫ್ರಿಜ್ ನಲ್ಲಿಡಿ. ಹೀಗೆ ಮಾಡುವುದರಿಂದ ಕೊತ್ತುಂಬರಿ ಸೊಪ್ಪು 2 ವಾರದ ತನಕ ಫ್ರೆಶ್ ಆಗಿರುತ್ತದೆ.
ಮೊದಲು ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ನೀರು ಆರುವಂತೆ ಒಣಗಿಸಿ. ನಂತರ ಕೊತ್ತುಂಬರಿ ಸೊಪ್ಪನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ಪ್ಲಾಸ್ಟಿಕ್ ಕವರ್ ಒದ್ದೆಯಾಗಿರದಂತೆ ಎಚ್ಚರ ವಹಿಸಿ. ಹೀಗೆ ಮಾಡುವುದರಿಂದ ಕೊತ್ತಂಬರಿ ಸೊಪ್ಪು 10-15 ದಿನದವರೆಗೆ ಫ್ರೆಶ್ ಆಗಿರುತ್ತದೆ.
ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ, ಗಾಳಿಯಾಡದ ಡಬ್ಬದಲ್ಲಿ ಅಥವಾ ಜಿಪ್ ಲಾಕ್ ಬ್ಯಾಗ್ ನಲ್ಲಿಟ್ಟರೆ ಒಂದು ತಿಂಗಳು ಹಾಳಾಗುವುದಿಲ್ಲ.