alex Certify ಕೈ ಕಾಲು ಸೆಳೆತಕ್ಕೆ ಪರಿಹಾರವೇನು….? ಇಲ್ಲಿದೆ ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈ ಕಾಲು ಸೆಳೆತಕ್ಕೆ ಪರಿಹಾರವೇನು….? ಇಲ್ಲಿದೆ ಉಪಯುಕ್ತ ಮಾಹಿತಿ

ಹೆಚ್ಚು ಕೆಲಸ ಮಾಡುವುದರಿಂದ ದೇಹದಲ್ಲಿ ಸುಸ್ತು, ಕೈಕಾಲುಗಳ ಸೆಳೆತ ಕಾಣಿಸಿಕೊಳ್ಳುತ್ತದೆ. ನರಗಳ ಮೇಲೆ ಒತ್ತಡ ಬಿದ್ದಾಗ, ರಕ್ತ ಪೂರೈಕೆ ಕಡಿಮೆಯಾದಾಗ ನೋವು ಕಾಣಿಸಿಕೊಳ್ಳುವುದು ಸಹಜ, ಆದರೆ ಪದೇ ಪದೇ ಈ ನೋವು ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ಕಂಪ್ಯೂಟರ್ ನಲ್ಲಿ ವಿಪರೀತ ಕೆಲಸ ಮಾಡಿದಾಗ ಕಾಣಿಸಿಕೊಳ್ಳುವ ಕೈ ಸೆಳೆತ ಐದು ನಿಮಿಷದ ವಿರಾಮದ ಬಳಿಕ ಕಡಿಮೆಯಾಗುತ್ತದೆ. ಆದರೆ ಕೆಲವೊಮ್ಮೆ ಇದು ದಿನವಿಡೀ ಉಳಿದುಕೊಂಡು ಕಿರಿಕಿರಿ ಉಂಟು ಮಾಡುತ್ತದೆ. ಇದು ರಕ್ತದ ಒತ್ತಡ ಹಾಗೂ ನರಗಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ.

ಕಂಪ್ಯೂಟರ್ ನಲ್ಲಿ ಕೆಲಸ ಮಾಡುವಾಗ ಕಾಣಿಸಿಕೊಳ್ಳುವ ಈ ಸೆಳೆತ ಕೆಲವೊಮ್ಮೆ ಭುಜದ ತನಕ ಹರಡಿ ಅಲ್ಲೂ ನೋವು ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಅಂಥ ಸಂದರ್ಭದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳುವುದೇ ಒಳ್ಳೆಯದು.

ನಿತ್ಯ ಸರಳವಾದ ವ್ಯಾಯಾಮಗಳನ್ನು ಮಾಡುವ ಮೂಲಕ, ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇವಿಸುವ ಮೂಲಕ ತರಕಾರಿ, ಹಣ್ಣನ್ನು ಹೆಚ್ಚು ತಿನ್ನುವ ಮೂಲಕ ಕೈಕಾಲು ಸೆಳೆತದಂಥ ನೋವಿನಿಂದ ಮುಕ್ತಿ ಹೊಂದಬಹುದು. ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆಯಿಂದ ನೋವಿರುವ ಜಾಗಕ್ಕೆ ಮಸಾಜ್ ಮಾಡುವುದರಿಂದ ಮರುದಿನದ ವೇಳೆಗೆ ನೋವು ಮಾಯವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...