ನೋಯ್ಡಾ ಸೆಕ್ಟರ್ 93 ಎನಲ್ಲಿ ಮೇ 22ರಂದು ಮಧ್ಯಾಹ್ನ 2:30ಕ್ಕೆ ಸರಿಯಾಗಿ ಕೇವಲ 9 ಸೆಕಂಡ್ಗಳ ಅವಧಿಯಲ್ಲಿ ದೇಶದ ಅತೀ ಎತ್ತರದ ಕಟ್ಟಡವೊಂದು ನೆಲಸಮಗೊಳ್ಳಲಿದೆ.
ಈ ಕಟ್ಟಡವನ್ನು ನೆಲಸಮಗೊಳಿಸುವಂತೆ ಕಳೆದ ವರ್ಷ ಆಗಸ್ಟ್ 31ರಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿತ್ತು. ಈ ಆದೇಶ ನೀಡಿದ 9 ತಿಂಗಳುಗಳ ಬಳಿಕ ಕಟ್ಟಡ ನೆಲಸಮಗೊಳ್ಳಲಿದೆ.
ಈ ಕಟ್ಟಡವು ಸ್ಫೋಟಗೊಳ್ಳುವ ಹಿನ್ನೆಲೆಯಲ್ಲಿ ಟವರ್ನ ಸುತ್ತ ಸುಮಾರು 1500 ಕುಟುಂಬಗಳು ತಮ್ಮ ಮನೆಯನ್ನು ತೊರೆಯಬೇಕಾಗುತ್ತದೆ. ಟವರ್ನತ್ತ ತೆರಳುವ ರಸ್ತೆಗಳು ಹಾಗೂ ನೋಯ್ಡಾ ಎಕ್ಸ್ಪ್ರೆಸ್ ವೇ ಪಕ್ಕದ ರಸ್ತೆಗಳನ್ನು ಮುಚ್ಚಲಾಗುತ್ತದೆ. 4000 ಕೆಜಿ ಸ್ಪೋಟಕಗಳನ್ನು ಬಳಸಿ ಟವರ್ನ್ನು ಸ್ಪೋಟಿಸಲಾಗುತ್ತದೆ.
ನಿಯೋಜನೆಯನ್ನು ಹಸ್ತಾಂತರಿಸಿದ ಕಂಪನಿಯಾದ ಎಡಿಫೈಸ್ ಇಂಜಿನಿಯರಿಂಗ್ ಸೋಮವಾರದಂದು ಕಟ್ಟಡ ನಾಶದ ಯೋಜನೆಯನ್ನು ಹಂಚಿಕೊಂಡಿದೆ. ಇದರಲ್ಲಿ 31 ಮಹಡಿಗಳನ್ನು ಹೊಂದಿರುವ ಕಟ್ಟಡವು ಮೊದಲು ನೆಲಸಮವಾಗಲಿದೆ. ನಂತರ 32 ಮಹಡಿಗಳನ್ನು ಹೊಂದಿರುವ ಕಟ್ಟಡವು ನೆಲಸಮಗೊಳ್ಳಲಿದೆ. ಕಟ್ಟಡಗಳು ಒಳಮುಖವಾಗಿ ನೆಲಸಮಗೊಳ್ಳಲಿದೆ.